ಜೆಎನ್​ಯು ವಿಚಾರ ಸಂಕಿರಣ ರದ್ದು: ಶಾಂತಿಭಂಗ ತಡೆಯಲು ಕ್ರಮ ಎಂದ ಅಧಿಕಾರಿಗಳು

ನವದೆಹಲಿ: ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಧ್ವಂಸ ಕುರಿತು ಸಾರ್ವಜನಿಕ ಉಪನ್ಯಾಸ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ವಿಚಾರ ಸಂಕಿರಣದಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಕೋಮುಗಲಭೆ ಮತ್ತು ಶಾಂತಿ ಹಾಗೂ ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ ಸಂಕಿರಣವನ್ನು ರದ್ದುಗೊಳಿಸಲಾಗಿದೆ ಎಂದು ವಿವಿ ಆಡಳಿತ ಮಂಡಳಿ ತಿಳಿಸಿದೆ.

ವಿಚಾರ ಸಂಕಿರಣದಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್​ ಸ್ವಾಮಿ ಭಾಷಣವನ್ನು ಮಾತ್ರ ರದ್ದುಗೊಳಿಸಿ ವಿವಾದಾತ್ಮಕ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ, ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಭಾಷಣಕ್ಕೆ ಅನುಮತಿ ನೀಡಲಾಗಿತ್ತು. ನಂತರ ಈ ನಿರ್ಧಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾದ ಇಡೀ ವಿಚಾರ ಸಂಕಿರಣವನ್ನೇ ರದ್ದುಗೊಳಿಸಲಾಗಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಯಾಕೆ ಎಂಬ ಶೀರ್ಷಿಕೆಯಡಿ ಸುಬ್ರಮಣಿಯನ್ ಸ್ವಾಮಿ ಮತ್ತು Reclaiming the Republic ಶೀರ್ಷಿಕೆಯಡಿ ಕಾರಟ್​ ಭಾಷಣ ಮಾಡಬೇಕಿತ್ತು. ಆದರೆ, ರಾಮಮಂದಿರ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಗೋಷ್ಠಿಗಳನ್ನೂ ಜೆಎನ್​ಯು ರದ್ದುಗೊಳಿಸಿದೆ. ಕೋಮು ಸಂಘರ್ಷ ಉಂಟಾಗಬಾರದು ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮ ರದ್ದುಗೊಳಿಸಿದ್ದೇವೆ ಎಂದು ಜೆಎನ್​ಯು ಹೇಳಿದೆ.

ಬಾಬ್ರಿ ಮಸೀದಿ ಧ್ವಂಸದಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಜೆಎನ್​ಯು ಆವರಣದ ಕೋಯ್ನಾ ಹಾಸ್ಟೆಲ್​ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

0

Leave a Reply

Your email address will not be published. Required fields are marked *