ಜಮ್ಮು ಕಾಶ್ಮೀರದ ನೌಗಾಮ್​​ನಲ್ಲಿ 3 ಭಯೋತ್ಪಾದಕರ ಹತ್ಯೆ

ನೌಗಾಮ್​​: ಜಮ್ಮು ಕಾಶ್ಮೀರದ ನೌಗಾಮ್ ಸೆಕ್ಟರ್​​ನಲ್ಲಿ 3 ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ. ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಇನ್ನು ಪ್ರತ್ಯೇಕ ಪ್ರಕರಣದಲ್ಲಿ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್​​ನಲ್ಲಿ ಭಯೋತ್ಪಾದಕರ ದಾಳಿಗೆ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಭಾರತೀಯ ಸೇನಾಪಡೆ ದೋಬಾ ಸರ್ದಾರ್ ಪ್ರದೇಶದ ಗಡಿ ನಿಯಂತ್ರಣ ರೇಖೆಯ ಬಳಿ 5-6 ನುಸುಳುಕೋರರ ಪ್ರಯತ್ನವನ್ನು ತಡೆದಿದ್ದಾರೆ. ಈ ವೇಳೆ ನುಸುಳುಕೋರರು ಸೇನಾಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡ ಇಬ್ಬರು ಸೈನಿರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರ ಬಳಿ ಇದ್ದ ಆರು ಬ್ಯಾಗ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

0

Leave a Reply

Your email address will not be published. Required fields are marked *