ಜೈ ಮಹಾರಾಷ್ಟ್ರ ಲೋಗೋ ತೆರವುಗೊಳಿಸಿದ ಮಹಾರಾಷ್ಟ್ರ

ಮುಂಬೈ: ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್​​ಗಳ ಮೇಲಿದ್ದ ಜೈ ಮಹಾರಾಷ್ಟ್ರ ಲೋಗೋವನ್ನು ತೆರವುಗೊಳಿಸಲಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಇರುವ ಗಡಿ ತಕರಾರು ಮತ್ತು ಭಾಷಾ ತಂಟೆಯ ಕಾರಣದಿಂದಾಗಿ ಈ ಕ್ರಮಕ್ಕೆ ಮಹರಾಷ್ಟ್ರ ಸರ್ಕಾರ ಮುಂದಾಗಿದೆ. ಮುಂಬೈನಿಂದ ಬೆಳಗಾವಿಗೆ ಸಂಚರಿಸಲಿರುವ ಬಸ್​ಗಳ ಮೇಲಿದ್ದ ಜೈ ಮಹಾರಾಷ್ಟ್ರ ಲೋಗೋವನ್ನು ತೆರವುಗೊಳಿಸಲಾಗಿದೆ.

ಕೆಲವು ದಿನಗಳ ಹಿಂದೆ ರಾಜ್ಯದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಕರ್ನಾಟಕದಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಗುವುದರ ವಿರುದ್ಧ ತಕರಾರು ತೆಗೆದಿದ್ದರು. ಆದರೆ, ಇದನ್ನು ವಿರೋಧಿಸಿದ್ದ ಎಂಎಇಎಸ್ ರೋಷನ್ ಬೇಗ್ ವಿರುದ್ಧ ಪ್ರತಿಭಟನೆ ನಡೆಸಿತ್ತು. ಇನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ಈ ರೋಷನ್ ಬೇಗ್ ಹೇಳಿಕೆಯನ್ನು ಖಂಡಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ನಡುವೆ, ಮಹಾರಾಷ್ಟ್ರದ ಸಾರಿಗೆ ಸಚಿವ ದಿವಾಕರ್ ರಾತೋತ್, ಜೈ ಮಹಾರಾಷ್ಟ್ರ ಲೋಗೋವನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ.

0

Leave a Reply

Your email address will not be published. Required fields are marked *