ಉತ್ತರ ಕರ್ನಾಟಕ ಭಾಗದಲ್ಲಿ ಜಗದೀಶ್ ಶೆಟ್ಟರ್ ಯಾವುದೇ ಕೆಲಸ ಮಾಡಿಲ್ಲ

ಉತ್ತರ ಕರ್ನಾಟಕ ಭಾಗದಲ್ಲಿ ಜಗದೀಶ್ ಶೆಟ್ಟರ್ ಯಾವುದೇ ಕೆಲಸ ಮಾಡಿಲ್ಲ ಅಂತ ವಿಧಾನ ಪರಿಷತ್​ ಸದಸ್ಯ ಟಿ.ಎ ಶರವಣ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವ್ರು ವಿಪಕ್ಷ ನಾಯಕ ಶೆಟ್ಟರ್ ಸಿಎಂ ಆಗಿದ್ದಾಗ, ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಬಿಜೆಪಿ ಮೊದಲ ಪಟ್ಟಿಯಲ್ಲಿ 72ರ ಪೈಕಿ 15 ಜನ ಈಗಾಗಲೇ ಬಂಡಾಯ ಎದ್ದಿದ್ದಾರೆ. ಸಂಸದ ಪ್ರಲ್ಹಾದ್ ಜೋಷಿಗೆ ಓಟು ಕೇಳುವ ನೈತಿಕ ಹಕ್ಕಿಲ್ಲ ಅಂದ್ರು. ಇನ್ನು ಈ ಬಾರಿ ರಾಜ್ಯಾದ್ಯಂತ ಜನ ಜೆಡಿಎಸ್​​​ನತ್ತ ಒಲವು ತೋರಿದ್ದಾರೆ. ಹೀಗಾಗಿ ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್​ ಜಯಭೇರಿ ಬಾರಿಸುತ್ತೆ ಅಂತ ಹೇಳಿದ್ರು.

0

Leave a Reply

Your email address will not be published. Required fields are marked *