ಜಿಎಸ್​ಎಲ್​​ವಿ ಮಾರ್ಕ್​ III ಉಪಗ್ರಹ ಉಡಾವಣೆ

ನವದೆಹಲಿ: ಇಸ್ರೋ ಇಂದು ಶ್ರೀಹರಿಕೋಟಾದಿಂದ  ಜಿಎಸ್​ಎಲ್​​ವಿ ಮಾರ್ಕ್​ III ಉಪಗ್ರಹವನ್ನು ಉಡಾಯಿಸುತ್ತಿದೆ. ಸಂಜೆ 5:28ಕ್ಕೆ ಉಡಾವಣಾ ಸಮಯವನ್ನು ನಿಗದಿಗೊಳಿಸಲಾಗಿದೆ. ದೇಶದ ಅತಿ ಭಾರವಾದ ಜಿಯೋಸಿಂಕ್ರೋನಸ್ ಉಪಗ್ರವಾಗಿದ್ದು, ಸಂವನ ಮಾಧ್ಯಮಗಳಿಗೆ ಸಂಬಂಧಿಸಿದ ಜಿಸ್ಯಾಟ್ – 19 ಉಪಗ್ರಹವನ್ನೂ ಇದರೊಂದಿಗೆ ಉಡಾವಣೆ ಮಾಡಲು ವೇದಿಕೆ ಸಿದ್ಧವಾಗಿದೆ. ಈ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದಲ್ಲಿ ಭಾರತ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದಂತಾಗುತ್ತದೆ. 640 ಟನ್ ತೂಕದ, 43.43 ಮೀಟರ್​ ಎತ್ತರದ ರಾಕೆಟ್​​ ಅನ್ನು ಆಂಧ್ರ ಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡವಾಣೆ ಮಾಡಲಾಗುತ್ತಿದೆ. ಇದರಲ್ಲಿ 3,136 ಕೆಜಿ ತೂಕದ ಜಿಸ್ಯಾಟ್ – 19 ಉಪಗ್ರಹ ಕೂಡ ಕಕ್ಷೆಗ ಸೇರಲಿದೆ.

0

Leave a Reply

Your email address will not be published. Required fields are marked *