6 ವಿಕೆಟ್ ಗಳಿಂದ ಲಕ್ನೋ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ : ಮತ್ತೆ ಮಿಂಚಿದ ಕುಲದೀಪ್ ಯಾದವ್

LSG vs DC Highlights; ಇನ್ನೂ 11 ಎಸೆತಗಳು ಬಾಕಿಯಿರುವಂತೆಯೇ 170 ರನ್ ಗಳಿಸುವುದರೊಂದಿಗೆ ಗೆಲುವಿನ ನಗೆ ಬೀರಿತು. ಡೆಲ್ಲಿ ಪರ 3 ವಿಕೆಟ್ ಪಡೆದ ಕುಲದೀಪ್ ಯಾದವ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು

ನವದೆಹಲಿ : ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಆರು ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿತು

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೋ ಸುಪರ್ ಜೈಂಟ್ಸ್​​ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ನಾಯಕ ಕೆಎಲ್ ರಾಹುಲ್ 39, ಕ್ವಿಂಟನ್ ಡಿ ಕಾಕ್ 19, ಅಯುಷ್ ಬಾದೋನಿ ಅಜೇಯ 55 ರನ್ ಗಳಿಸದದ್ದು ಹೊರತುಪಡಿಸಿದರೆ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಇದರಿಂದಾಗಿ 167 ರನ್ ಗಳಿಸಿದ ಲಕ್ನೋ, ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 168 ರನ್ ಗಳ ಗುರಿ ನೀಡಿತು.

ಇದು ಗೆಲುವಿನ ಮೊತ್ತ ಆಗಿರಲಿಲ್ಲ. ಇನ್ನೂ 35 ರನ್ ಗಳಾದರೂ ಬೇಕಿತ್ತು. ಆಗ ಪಂದ್ಯದ ಗತಿ ಬದಲಾಗಬಹುದಿತ್ತೇನೋ.. ಈ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಬ್ಯಾಟ್ಸ್ ಮನ್ ಪೃಥ್ವಿ ಶಾ 32, ಡೇವಿಡ್ ವಾರ್ನರ್ 8, ಜೆಕ್ ಫ್ರಾಸರ್ – ಮ್ಯಾಕ್ ಗುರ್ಕ್ 55,ನಾಯಕ ರಿಷಭ್ ಪಂತ್ 4, ತ್ರಿಸ್ತಾನ್ ಸ್ಟಬ್ಸ್ 15 ರನ್ ಗಳಿಸುವುದರೊಂದಿಗೆ ಇನ್ನೂ 11 ಎಸೆತಗಳು ಬಾಕಿಯಿರುವಂತೆಯೇ 170 ರನ್ ಗಳಿಸುವುದರೊಂದಿಗೆ ಗೆಲುವಿನ ನಗೆ ಬೀರಿತು. ಡೆಲ್ಲಿ ಪರ 3 ವಿಕೆಟ್ ಪಡೆದ ಕುಲದೀಪ್ ಯಾದವ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

Author

error: