ಭಾರತೀಯ ಯುವಕರು ಉದ್ಯೋಗ ಅರಸಿಕೊಂಡು ಅಲೆಯುವುದಿಲ್ಲ: ಮೋದಿ

ಸೇಂಟ್ ಪೀಟರ್ಸ್​​ಬರ್ಗ್​​: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ರಷ್ಯಾದ ಸೆಂಟ್​ ಪೀಟರ್ಸ್​ಬರ್ಗ್​ನಲ್ಲಿ ಜಾಗತಿಕ ಆರ್ಥಿಕ ವೇದಿಕೆ ಉದ್ದೇಶಿಸಿ ಮಾತನಾಡಿದರು. ಭಾರತದಲ್ಲಿ ಬಂಡವಾಳಸ್ನೇಹಿ ವಾತಾವರಣವಿದೆ ಎಂದರು. ಅಲ್ಲದೇ, ಬಂಡವಾಳಶಾಹಿಗಳಿಗೆ ಆಮಂತ್ರಣ ನೀಡಿದರು. ನಿಮಗೆ ರಕ್ಷಣಾ ಹಾಗೂ ಸೇವಾ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಭಾರತದಲ್ಲಿ ಒಳ್ಳೆಯ ಅವಕಾಶವಿದೆ ಎಂದರು. ಭಾರತದ ಯುವಜನತೆಯನ್ನು ಹಾಡಿ ಹೊಗಳಿದ ಮೋದಿ ನಮ್ಮ ಯುವಕರು ಉದ್ಯೋಗ ಸೃಷ್ಟಿಕರ್ತರೇ ಹೊರತು, ಉದ್ಯೋಗ ಅರಸಿ ಹೋಗುವವರಲ್ಲ ಎಂದರು. ಮಂಗಳಯಾನದ ಕುರಿತು ಮಾತನಾಡಿದ ಮೋದಿ, ಹಲವು ದೇಶಗಳು ಮಂಗಳಯಾನ ಮಾಡಲು ಹೋಗಿ ವೈಫಲ್ಯ ಕಂಡಿವೆ. ಆದರೆ, ನಮ್ಮ ದೇಶ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದೆ ಎಂದು ಮೋದಿ ಹೇಳಿದ್ರು.

0

Leave a Reply

Your email address will not be published. Required fields are marked *