ಭಾರತೀಯ ಮೂಲದ ಸಲಿಂಗಕಾಮಿಗೆ ಐರ್ಲೆಂಡ್ ಪ್ರಧಾನಿಯಾಗುವ ಯೋಗ

ಡಬ್ಲಿನ್: ಭಾರತೀಯ ಮೂಲದ ಸಲಿಂಗಕಾಮಿ ಸಚಿವ ಲಿಯೋ ವರದ್ಕರ್ ಐರ್ಲೆಂಡ್​​ ಪ್ರಧಾನಿಯಾಗುವ ಸಾಧ್ಯತೆ ಇದೆ. ಲಿಯೋ ವರದ್ಕರ್ ಮುಂಬೈ ಸಂಜಾತ ವೈದ್ಯ ಮತ್ತು ಐರ್ಲೆಂಡ್​​ನಲ್ಲಿ ಸಚಿವರಾಗಿದ್ದು, ಕ್ಯಾಥೋಲಿಕ್ಕರ ಪ್ರಾಬಲ್ಯವಿರುವ ದೇಶದಲ್ಲಿ ಪ್ರಧಾನಿಯಾಗಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.
ಆಡಳಿತಾರೂಢ ಫೈನ್ ಗ್ಯಾಲ್ ಪಕ್ಷ ಮತ್ತೊಮ್ಮೆ ಐರ್ಲೆಂಡ್​​ನಲ್ಲಿ ಅಧಿಕಾರ ಹಿಡಿದಲ್ಲಿ, 38 ವರ್ಷದ ವರದ್ಕರ್ ಪ್ರಧಾನಿಯಾದಲ್ಲಿ ಪ್ರಪಂಚದಲ್ಲೇ ಅತ್ಯಂತ ಕಿರಿಯ ವ್ಯಕ್ತಿ ಪ್ರಧಾನಿಯಾದ ದಾಖಲೆಯನ್ನು ಬರೆಯಲಿದ್ದಾರೆ.

ಭಾರತೀಯ ಮೂಲದ ಅಶೋಕ್ ವರದ್ಕರ್​​ ಮತ್ತು ಇಂಗ್ಲೆಂಡ್ ಮೂಲದ ಮಿರಿಯಂ ಅವರ ಕಿರಿಯ ಪುತ್ರ ಲಿಯೋ ವರದ್ಕರ್. ರಾಜಕೀಯ ಪ್ರವೇಶಿಸುವ ಮುನ್ನ ಅವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. 2007ರಲ್ಲಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ ಅವರು, ಲೋಕಸಭೆ ಸದಸ್ಯರಾಗಿ ಆಯ್ಕೆಯಾದರು. 2015ರಲ್ಲಿ ತಾವು ಸಲಿಂಗಕಾಮಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು.

ಆಡಳಿತಾರೂಢ ಪಕ್ಷದ ಕೆನ್ನಿ ಆರು ವರ್ಷಗಳ ನಂತರ ಈ ವಾರ ಪಕ್ಷದ ನೇತೃತ್ವವನ್ನು ತೊರೆಯಲಿದ್ದಾರೆ. ವರದ್ಕರ್​​ ಅವರಿಗೆ ಪಕ್ಷದ ಮುಖಂಡು ಮತ್ತು ಸಚಿವರ ಬೆಂಬಲ ಕೂಡ ವ್ಯಕ್ತವಾಗಿದೆ ಎಂದು ವರದಿಯಾಗಿದೆ. ಮುಂದಿನ ಪ್ರಧಾನಿ ಅಭ್ಯರ್ಥಿಯನ್ನು ಆದಷ್ಟು ಶೀಘ್ರವಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.

ಐರ್ಲೆಂಡ್​​ ದೇಶದಲ್ಲಿ 1993ರಲ್ಲಿ ಸಲಿಂಗಕಾಮವನ್ನು ಕ್ರಿಮಿನಲ್ ಅಪರಾಧದಿಂದ ಮುಕ್ತಗೊಳಿಸಲಾಗಿತ್ತು. ಅಲ್ಲದೇ, 1996ರವರೆಗೆ ವಿಚ್ಛೇದನಕ್ಕೆ ಕೂಡ ಅನುಮತಿ ಇರಲಿಲ್ಲ. ಈ ದೇಶದಲ್ಲಿ ಯೂರೋಪಿನ ಅತ್ಯಂತ ಕಠಿಣ ನಿಯಮಗಳು ಇಂದಿಗೂ ಜಾರಿಯಲ್ಲಿವೆ. ಗರ್ಭಪಾತ ಮತ್ತು ಸಲಿಂಗ ವಿವಾಹದಂತಹ ವಿಷಯಗಳ ಪರವಾಗಿ ವರದ್ಕರ್ ವಾದಿಸುತ್ತಿದ್ದಾರೆ. ಸಾಂಪ್ರದಾಯಿಕ ದೇಶದಲ್ಲಿ ಸಲಿಂಗಕಾಮಿ ಲಿಯೋ ವರದ್ಕರ್ ಗಮನಾರ್ಹ ಸಾಧನೆ ಮೆರೆದಿದ್ದಾರೆ.

ನನ್ನನ್ನು ಬೆಂಬಲಿಸಿದವರಿಗೆಲ್ಲ ಧನ್ಯವಾದಗಳನ್ನು ವರದ್ಕರ್ ಅರ್ಪಿಸಿದ್ದಾರೆ. ಅಲ್ಲದೇ ಚುನಾವಣಾ ವೇದಿಕೆಗೆ ಎದುರು ನೋಡುತ್ತಿರುವುದಾಗಿ ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *