90ನೇ ಸ್ಪೆಲ್ಲಿಂಗ್ ಬೀ ಪ್ರಶಸ್ತಿ ಪಡೆದ ಭಾರತೀಯ ಮೂಲದ ಬಾಲಕಿ

ಮೆರಿಲ್ಯಾಂಡ್:  ಭಾರತೀಯ ಮೂಲದ 12ರ ಹರೆಯದ ಬಾಲಕಿ 90ನೇ ಸ್ಪೆಲ್ಲಿಂಗ್ ಬೀ ಪ್ರಶಸ್ತಿ ಪಡೆದಿದ್ದಾಳೆ. ‘marocain’ ಶಬ್ದವನ್ನು ಕರಾರುವಕ್ಕಾಗಿ ಉಚ್ಚರಿಸಿದ ಅನನ್ಯ, ಭಾರತೀಯ ಮೂಲದ ರೋಹನ್ ರಾಜೀವ್​​ ಅವರನ್ನು ಸೋಲಿಸುವ ಮೂಲಕ ಸ್ಕ್ರಿಪ್ಸ್​​​ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಪ್ರಶಸ್ತಿಯನ್ನು ತನ್ನ ಮುಡಿಗೆ ಏರಿಸಿಕೊಂಡಿದ್ದಾಳೆ.  ಅಮೆರಿಕದ ಮೆರಿಲ್ಯಾಂಡ್​​ನಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಕಳೆದ ವರ್ಷ ಟೆಕ್ಸಾಸ್​​ನ ನಿಹಾರ್ ಜಂಗ್​ ಮತ್ತು ನ್ಯೂಯಾರ್ಕ್​​ನ ಜೈರಾಂ ಹತ್ವಾರ್ ಜಂಟಿಯಾಗಿ ಈ ಪ್ರಶಸ್ತಿಯನ್ನು ಪಡೆದಿದ್ದರು. ಈ ಸ್ಪರ್ಧೆಯಲ್ಲಿ 35 ಶಬ್ದಗಳನ್ನು ಸರಿಯಾಗಿ ಉಚ್ಚರಿಸಬೇಕು ಎಂಬ ನಿಯಮವಿದೆ. ಅನನ್ಯ ಮತ್ತು ರೋಹನ್ ನಡುವೆ 20 ಸುತ್ತಿನ ಸ್ಪರ್ಧೆ ನಡೆಯಿತು. ‘marram’ ಶಬವನ್ನು ತಪ್ಪಾಗಿ ಉಚ್ಚರಿಸುವ ಮೂಲಕ ರೋಹನ್ ಸ್ಪರ್ಧೆಯಲ್ಲಿ ಹಿಂದೆ ಬಿದ್ದ. ನಂತರದ ಸುತ್ತುಗಳಲ್ಲಿ ಅನನ್ಯ ಮೇಲುಗೈ ಸಾಧಿಸಿದ್ದಾಳೆ.

ಸ್ಪರ್ಧಿಗಳಿಗೆ hypapante, cheiropompholyx, potichimanie, tchefuncte, brabançon and rastacouère ಶಬ್ದಗಳನ್ನು ಉಚ್ಚರಿಸುವ ಸವಾಲನ್ನು ಒಡ್ಡಲಾಗಿತ್ತು. ಗೆಲುವಿನ ನಂತರ ಪ್ರತಿಕ್ರಿಯಿಸಿರುವ ಅನನ್ಯ, ನಾನು ಕೇವಲ ಶಬ್ದಗಳೆಡೆಗೆ ಗಮನವನ್ನು ಕೇಂದ್ರೀಕರಿಸಿದ್ದೆ. ಮತ್ತು ಅವುಗಳನ್ನು ಸರಿಯಾಗಿ ಉಚ್ಚರಿಸಿದೆ ಎಂದಿದ್ದಾಳೆ. ಅಲ್ಲದೇ, ಅನೇಕ ಸುತ್ತುಗಳಲ್ಲಿ ಸ್ಪರ್ಧಿಸುವುದು ಕುತೂಹಲಕಾರಿಯಾಗಿತ್ತು ಎಂದು ಕೂಡ ಅಭಿಪ್ರಾಯಪಟ್ಟಿದ್ದಾಳೆ.

ಕಳೆದ ಮೂರು ವರ್ಷಗಳಿಂದ ಸ್ಪರ್ಧಿಗಳು ಸಮಬಲ ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪರ್ಧೆಯ ಸಂಘಟಕರು ಈ ಬಾರಿ ಬರಹದ ಟೈ ಬ್ರೇಕರ್​ ನಿಯಮವನ್ನು ಕೂಡ ಪರಿಚಯಿಸಿದ್ದರು. ಆದರೆ, ಈ ಬಾರಿ ಅನನ್ಯ ಎಲ್ಲ ಸ್ಪರ್ಧಿಗಳಿಗಿಂತ ಮೇಲುಗೈ ಸಾಧಿಸಿದ್ದರಿಂದ ಟೈ ಬ್ರೇಕರ್​ ಪರೀಕ್ಷೆಗೆ ಅವಕಾಶವಾಗಿಲ್ಲ. ಸ್ಪರ್ಧೆಯಲ್ಲಿ ಗೆದ್ದವರಿಗೆ 40,000 ಅಮೆರಿಕನ್ ಡಾಲರ್ ಮತ್ತು ಎರಡನೇ ಸ್ಥಾನ ಗಳಿಸಿದವರಿಗೆ 30,000 ಅಮೆರಿಕನ್ ಡಾಲರ್ ಪಡೆಯುತ್ತಾರೆ. ವೆಬ್​​ಸ್ಟರ್​​ ಅನ್​​ಬ್ರಿಡ್ಜ್ಡ್​​ ಡಿಕ್ಷನರಿಯ ಆಧಾರದಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ವರದಿಯಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *