12 ಭಯೋತ್ಪಾದಕರ ಛಾಯಾಚಿತ್ರ ಬಿಡುಗಡೆ

ಶ್ರೀನಗರ: 12 ಮೋಸ್ಟ್ ವಾಂಟೆಡ್ ಉಗ್ರರ ಛಾಯಾ ಚಿತ್ರಗಳನ್ನು ಭಾರತೀಯ ಸೇನೆ ಬಿಡುಗಡೆಗೊಳಿಸಿದೆ. ದಕ್ಷಿಣ ಕಾಶ್ಮೀರದ ಟ್ರಾಲ್​​​ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸಬ್ಜರ್ ಅಹಮದ್ ಭಟ್ ಹತ್ಯೆಗೈದ ನಾಲ್ಕು ದಿನಗಳ ನಂತರ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಛಾಯಾಚಿತ್ರಗಳಲ್ಲಿರುವ ಉಗ್ರರು ಇತ್ತೀಚೆಗೆ ಹಿಜ್ಬುಲ್ ಮುಜಾಹಿದ್ದೀನ್ ಸೇರಿಕೊಂಡಿದ್ದರು. ಇವರನ್ನು ಪ್ರಧಾನವಾಗಿ ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ನಿಯೋಜಿಸಲಾಗಿತ್ತು ಎಂದು ವರದಿಯಾಗಿದೆ. ಇನ್ನು ರಾಮಪು ಸೆಕ್ಟರ್​​ನಲ್ಲಿ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಆರು ಉಗ್ರರರನ್ನು ಭಾರತೀಯ ಸೇನೆ ಹತ್ಯೆಗೈದಿದೆ.

0

Leave a Reply

Your email address will not be published. Required fields are marked *