ಭಾರತದೊಂದಿಗೆ ಆಳವಾದ ಸಂಬಂಧವಿದೆ: ವ್ಲಾಡಿಮಿರ್ ಪುಟಿನ್

ಸೇಂಟ್ ಪೀಟರ್ಸ್ ಬರ್ಗ್​: ರಷ್ಯಾ ದೇಶಕ್ಕೆ ಭಾರತದೊಂದಿಗೆ ಇರುವಷ್ಟು ಆಳವಾದ ಸಂಬಂಧ ಬೇರಾವುದೇ ದೇಶದೊಂದಿಗೆ ಇಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ಅತ್ಯಂತ ಆಪ್ತ ದೇಶ ಎಂದ ಅವರು, ಪಾಕಿಸ್ತಾನದೊಂದಿಗಿನ ವ್ಯಾವಹಾರಿಕ ಸಂಬಂಧದಿಂದಾಗಿ ಭಾರತದೊಂದಿಗಿನ ಬಾಂಧವ್ಯ ಕರಗಿ ಹೋಗುವುದಿಲ್ಲ ಎಂದು ಕೂಡ ಅವರು ಹೇಳಿದ್ದಾರೆ. ಅಲ್ಲದೇ, ಕ್ಷಿಪಣಿ ಮತ್ತು ಸಹಕಾರ ಕ್ಷೇತ್ರ ಸೇರಿದಂತೆ ಸೂಕ್ಷ್ಮ ವಿಷಯಗಳಲ್ಲಿ ಭಾರತದೊಂದಿಗೆ ಆಳವಾದ ಸಂಬಂಧವಿದೆ ಎಂದರು.

ಭಾರತಕ್ಕೆ ಭಯೋತ್ಪಾದನೆಯ ಬೆದರಿಕೆ ಎದುರಾದಲ್ಲಿ ಯಾವಾಗಲೂ ಭಾರತಕ್ಕೆ ಬೆಂಬಲ ನೀಡುವ ಭರವಸೆಯನ್ನೂ ಅವರು ನೀಡಿದರು. ರಷ್ಯಾ ಭಾರತದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತ ಇತರ ದೇಶಗಳೊಂದಿಗೆ ದ್ವಿಪಕ್ಷೀಯ ಸಹಕಾರ ವಿಷಯದಲ್ಲಿ ನಿರ್ಬಂಧ ವಿಧಿಸಿಕೊಳ್ಳಬೇಕು ಎಂದು ಕೂಡ ಅವರು ಅಭಿಪ್ರಾಯಪಟ್ಟರು.

ಪಾಕಿಸ್ತಾನದೊಂದಿಗೆ ನಮಗೆ ಸೇನೆ ಸಂಬಂಧಿಸಿದಂತೆ ಗಟ್ಟಿ ಬಾಂಧವ್ಯವಿಲ್ಲ. ಅಲ್ಲದೇ, ಪಾಕಿಸ್ತಾನದೊಂದಿಗಿನ ವ್ಯಾವಹಾರಿಕ ಸಂಬಂಧದಿಂದಾಗಿ ಭಾರತ ಮತ್ತು ರಷ್ಯಾ ದೇಶಗಳ ನಡುವಿನ ವ್ಯಾಪಾರ – ವಾಣಿಜ್ಯ ವಿಷಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ಭಾರತ 100 ಕೋಟಿಗಿಂತ ಹೆಚ್ಚಿನ ಜನಸಂಖ್ಯೆ ಬೃಹತ್ ದೇಶ. ರಷ್ಯಾ ಕೂಡ ಬೃಹತ್ ದೇಶ. ಉಭಯ ದೇಶಗಳು ಪರಸ್ಪರ ಪೂರಕ ಆಸಕ್ತಿಗಳನ್ನು ಹೊಂದಿವೆ. ಭಾರತದ ಹಿತಾಸಕ್ತಿ ವಿಷಯದಲ್ಲಿ ನಾವು ಗೌರವಯುತ ಭಾವನೆ ಹೊಂದಿದ್ದೇವೆ ಎಂದರು.

ಸೇಂಟ್ ಪೀಟರ್ಸ್​​ ಬರ್ಗ್​​ನಲ್ಲಿರುವ ಕೊನಸ್ಟಾಂಟಿನ್ ಅರಮನೆಯಲ್ಲಿ ನಡೆದ ಸಂವಾದದಲ್ಲಿ ಅವರು ಭಾಗವಹಿಸಿದ್ದರು. ಈ ಕಟ್ಟಡದ 18ನೇ ಶತಮಾನದ ಚಿತ್ರಗಳು, ಪಿಂಗಾಣಿ ಅಲಂಕಾರಿಕ ವಸ್ತುಗಳು ಮೊದಲಾದ ಸೌಕರ್ಯವಿರು ಸಂಕೀರ್ಣವಾಗಿದೆ.

ಚೌಕಾಕಾರದ ಮೇಜಿನ ಮುಂದೆ ಆಯ್ದ ಜಾಗತಿಕ ಸುದ್ದಿ ಏಜೆನ್ಸಿಗಳ ಸಂಪಾದಕರೊಂದಿಗೆ 64 ವರ್ಷದ ವ್ಲಾಲಿಡಿಮಿರ್ ಪುಟಿನ್ ಸಂವಾದದಲ್ಲಿ ಭಾಗವಹಿಸಿದ್ದರು. ಸಂಪಾದಕರ ಅಭಿರುಚಿ ಆಧರಿಸಿ ಎದುರಾದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಈ ವೇಳೆ ಜಾಗತಿಕ ವಿಷಯಗಳಾದ ಸಿರಿಯ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭವಿಷ್ಯದಲ್ಲಿ ದೇಶಗಳ ಧೃವೀಕರಣದ ಕುರಿತು ಮಾತನಾಡಿದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *