ಸೇನೆಯ ಯಾವುದೇ ದರ್ಜೆಯ ವ್ಯಕ್ತಿ ತಪ್ಪು ಮಾಡಿದರೆ ಕಠಿಣ ಶಿಕ್ಷೆ

ಶ್ರೀನಗರ: ಭಾರತೀಯ ಸೇನೆಯ ಯಾವುದೇ ದರ್ಜೆಯ ವ್ಯಕ್ತಿ, ಯಾವುದೇ ತಪ್ಪು ಮಾಡಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಒಂದು ವೇಳೆ ಮೇಜರ್ ಗೊಗೋಯ್ ತಪ್ಪು ಮಾಡಿದ್ದಲ್ಲಿ ಅವರಿಗೆ ಶಿಕ್ಷೆ ನೀಡಲಾಗುವುದು. ಈ ಶಿಕ್ಷೆ ಭವಿಷ್ಯದಲ್ಲಿ ಉದಾಹರಣೆಯಾಗಿ ಉಳಿಯಲಿದೆ ಎಂದು ಹೇಳಿದ್ದಾರೆ. ನಿನ್ನೆ ಒಬ್ಬ ಮಹಿಳೆ ಮತ್ತು ವ್ಯಕ್ತಿಯೊಂದಿಗೆ ಮೇಜರ್ ಗೊಗೋಯ್, ಖಾಸಗಿ ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಗೊಗೋಯ್, ಮಹಿಳೆ ಮತ್ತು ಒಬ್ಬ ಪುರುಷನನ್ನು ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಪಿನ್ ರಾವತ್ ಹೇಳಿಕೆ ನೀಡಿದರು.

ಕಳೆದ ಕೆಲ ತಿಂಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದ್ದ ಕಲ್ಲೆಸೆತವನ್ನು ನಿಯಂತ್ರಿಸಲು ಸೇನೆಯ ವಾಹನಕ್ಕೆ ವ್ಯಕ್ತಿಯೊಬ್ಬನನ್ನು ಗುರಾಣಿಯಂತೆ ಬಳಸಿ ಸಾಕಷ್ಟು ವಿರೋಧ ಎದುರಿಸಿದ್ದ ಮೇಜರ್ ಗೊಗೋಯ್ ಅವರನ್ನು ನಿನ್ನೆ ಕಾಶ್ಮೀರದಲ್ಲಿ ಬಂಧಿಸಲಾಗಿತ್ತು.

ಕಾಶ್ಮೀರ ಗಡಿಯಲ್ಲಿ ಶಾಂತಿ ಸ್ಥಾಪಿಸುವ ಸಲುವಾಗಿ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಆದರೆ, ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿ ನಡೆಸುತ್ತಿರುವ ದಾಲಿಯಿಂದಾಗಿ ಜನ ಸಾವಿಗೀಡಾಗುತ್ತಿದ್ದಾರೆ ಮತ್ತು ಜನರ ಆಸ್ತಿಪಾಸ್ತಿಗಳಿಗೆ ನಷ್ಟವಾಗುತ್ತಿದೆ. ಪಾಕಿಸ್ತಾನ ಅಕ್ರಮ ನುಸುಳುವಿಕೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಜನರಲ್ ಬಿಪಿನ್ ರಾವತ್ ಸಲಹೆ ನೀಡಿದ್ದಾರೆ.

0

Leave a Reply

Your email address will not be published. Required fields are marked *