ತ್ರಿವಳಿ ತಲಾಖ್ ಪ್ರಸ್ತಾಪ: ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದರಾ ಮೋದಿ?

ದಂಡ್​​ಕುಲಾ: ತ್ರಿವಳಿ ತಲಾಖ್ ವಿಷಯಕ್ಕೆ ಸಂಬಂಧಿಸಿದಂತೆ ನಾನು ಮೌನವಾಗಿರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಗುಜರಾತ್​​ ಚುನಾವಣಾ ಪ್ರಚಾರದಲ್ಲಿ ತ್ರಿವಳಿ ತಲಾಖ್ ವಿರುದ್ಧ ಮತ್ತೆ ಗುಡುಗಿದ್ದಾರೆ. ಜೊತೆಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಧರ್ಮ, ಜಾತಿ ವಿಷಯಗಳನ್ನು ಪ್ರಸ್ತಾಪಿಸಬಾರದು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪ್ರಧಾನಿಯೇ ಉಲ್ಲಂಘಿಸಿದ ಅನುಮಾನ ಮೂಡಿದೆ.

ಇಂದು ಗುಜರಾತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲವನ್ನೂ ಚುನಾವಣಾ ದೃಷ್ಟಿಯಿಂದ ನೋಡುವುದಿಲ್ಲ. ತಲಾಖ್ ವಿಷಯ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದೆ ಎಂದರು. ಅಲ್ಲದೇ, ಮಾನವೀಯತೆ ಮೊದಲು, ಚುನಾವಣೆ ಅನಂತರ ಎಂದು ಅಭಿಪ್ರಾಯಪಟ್ಟರು.

ತ್ರಿವಳಿ ತಲಾಖ್ ವಿಷಯ ಸುಪ್ರೀಂ ಕೋರ್ಟ್​​ನಲ್ಲಿ ವಿಚಾರಣೆಯ ಹಂತದಲ್ಲಿದೆ. ಸರ್ಕಾರ ಈ ಕುರಿತು ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಪತ್ರಿಕೆಗಳು ಉತ್ತರಪ್ರದೇಶ ಚುನಾವಣೆಯ ಸಂದರ್ಭದಲ್ಲಿ ಮೋದಿಯವರು ಈ ವಿಷಯಕ್ಕೆ ಸಂಬಂಧಿಸಿದಂತೆ ಮೌನವಾಗಿದ್ದರು ಎಂದವು. ಆದರೆ, ಚುನಾವಣೆಯಲ್ಲಿ ನಷ್ಟವಾಗುತ್ತದೆ. ಆದ್ದರಿಂದ ಈ ಕುರಿತು ಮಾತನಾಡಬೇಡಿ ಎಂದು ಜನ ನನಗೆ ಸೂಚಿಸಿದ್ದರು ಎಂದು ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಈ ಮೂಲಕ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ಆದರೆ, ಯಾವ ಜನ ಅವರಿಗೆ ಆಗ ಮಾತನಾಡದಂತೆ ಹೇಳಿದ್ದರು. ಮತ್ತು ಈಗ ಗುಜರಾತ್​​ನಲ್ಲಿ ಮಾತಾನಾಡಿ ಎಂದು ಹೇಳಿದ್ದು ಯಾರು ಎಂಬ ಪ್ರಶ್ನೆಗಳಿಗೆ ಕೂಡ ಪ್ರಧಾನಿ ಮೋದಿಯವರ ಮಾತುಗಳು ಕಾರಣವಾಗಿವೆ.

0

Leave a Reply

Your email address will not be published. Required fields are marked *