ಪ್ರತ್ಯೇಕತಾವಾದಿಗಳ ಸಭೆ ತಡೆದ ಕಾಶ್ಮೀರ ಪೊಲೀಸರು

ಶ್ರೀನಗರ: ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಗುಂಪು ಹುರಿಯತ್​ ಕಾನ್ಫರೆನ್ಸ್​​ನ ಮುಖ್ಯಸ್ಥ ಸೈಯದ್ ಅಲಿ ಶಾ ಗೀಲಾನಿ ಭೇಟಿಗೆ ತೆರಳುತ್ತಿದ್ದ ಮಿರ್ವೈಜ್ ಉಮರ್ ಫಾರೂಕ್​​ಗೆ ಗೃಹ ಬಂಧನ ವಿಧಿಸಲಾಗಿದ್ದು, ಮತ್ತೊಬ್ಬ ಪ್ರತ್ಯೇಕತಾವಾದಿ ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಪಾಕ್​​ನಿಂದ ಹಣ ಪಡೆಯುತ್ತಿದ್ದ ಆರೋಪಿ ಯಾಸೀನ್ ಮಲಿಕ್​​ನನ್ನು ಶ್ರೀನಗರದಲ್ಲಿ ಬಂಧಿಸಲಾಗಿದೆ. ಯಾಸಿನ್ ಮಲಿಕ್​​ನನ್ನು ಬಂಧಿಸಿಲ್ಲ, ವಶಕ್ಕೆ ಪಡೆಯಲಾಗಿದೆ ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ.

ಗೀಲಾನಿಯವರ ಹೈದ್​ಪೊರಾ ನಿವಾಸದ ಹೊರಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರತ್ಯೇಕತಾವಾದಿಗಳು ನಡೆಸಲು ಉದ್ದೇಶಿಸಿದ್ದ ಸಭೆಯನ್ನು ನಿಯಂತ್ರಿಸಲಾಗಿದೆ. ಸಭೆಯ ನಂತರ ಪ್ರತ್ಯೇಕತಾವಾದಿಗಳು ಸುದ್ದಿ ಗೋಷ್ಠಿ ನಡೆಸುವವರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರದಿಂದ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸುತ್ತಿರುವ ಕುರಿತು ಪ್ರತ್ಯೇಕತಾವಾದಿಗಳು ಚರ್ಚಿಸಲು ಸಭೆ ನಿಗದಿಯಾಗಿತ್ತು. ಗೀಲಾನಿ ಅಳಿಯ ಅಲ್ತಾಫ್​​ ಫಂತೂಷ್, ಉದ್ಯಮಿ ಜಹೂರ್ ವರಾಲಿ, ಶಹೀದ್ ಉಲ್ ಇಸ್ಲಾಮ್​, ಅವಾಮಿ ಕ್ರಿಯಾ ಸಮಿತಿಯ ಮುಖ್ಯಸ್ಥ ಮಿರ್ವೈಜ್ ಉಮರ್ ಫಾರೂಕ್ ಮತ್ತು ಎರಡನೇ ಹಂತದ ಪ್ರತ್ಯೇಕತಾವಾದಿಗಳ ವಿರುದ್ಧ, ಪಾಕಿಸ್ತಾನದಿಂದ ಆರ್ಥಿಕ ನೆರವು ಪಡೆಯತ್ತಿದ್ದ ಆರೋಪದ ಮೇಲೆ ಕಳೆದ ವಾರ ಎನ್​​ಐಎ ದಾಳಿ ನಡೆಸಿತ್ತು.

ಮೇ 19ರಂದು ಪ್ರಾಥಮಿಕ ತನಿಖೆ ಆಧರಿಸಿ ಗೀಲಾನಿ ವಿರುದ್ಧ ಕೂಡ ವಿಧ್ವಂಸಕ ಚಟುವಟಿಕೆಗಳ ಆರೋಪವನ್ನು ಹೊರಿಸಲಾಗಿತ್ತು. ಖಾಸಗಿ ಸುದ್ದಿ ಸಂಸ್ಥೆ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ನಯೀಂ ಖಾನ್ ಪಾಕ್​​ನಿಂದ ಹಣ ಪಡೆಯುತ್ತಿರುವುದನ್ನು ಒಪ್ಪಿಕೊಂಡಿದ್ದ ವೀಡಿಯೋ ಪ್ರಸಾರವಾದ ನಂತರ ಎನ್​​​ಐಎ ದಾಳಿ ನಡೆಸಿತ್ತು. ಫರೂಕ್ ಅಹಮದ್ ದರ್ ಅಲಿಯಸ್ ಬಿಟ್ಟಾ ಕರಾತೆ ಮತ್ತು ತೆಹ್ರೀಕ್ ಇ ಹುರಿಯತ್ ಉಗ್ರ ಸಂಘಟನೆಯ ಗಾಜಿ ಜಾವೆದ್ ಬಾಬಾ ಅವರ ಮೇಲೆ ದಾಲಿ ನಡೆದಿತ್ತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *