ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ತೊರೆಯಲಿದೆಯೇ ಅಮೆರಿಕ?

ವಾಷಿಂಗ್ಟನ್: ವಿಶ್ವಸಂಸ್ಥೆಯ ಮಾನವ ಹಕ್ಕು ಕೌನ್ಸಿಲ್​ನಿಂದ ಅಮೆರಿಕ ಹೊರಬರುವ ಚಿಂತನೆ ನಡೆಸಿದೆ. ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಇಸ್ರೇಲ್ ವಿರೋಧಿ ಪೂರ್ವಾಗ್ರಹ ಮೂಡಿದೆ ಎಂಬ ಕಾರಣ ನೀಡಿ ಅಮೆರಿಕ ಈ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಅಮೆರಿಕ ರಾಯಭಾರಿಗಳು ಮತ್ತು ಚಳವಳಿಗಾರರು ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆ ಈ ಕುರಿತು ಅಂತಿಮ ನಿರ್ಧಾರವನ್ನು ಜಿನೇವಾ ಭೇಟಿ ವೇಳೆ ಪ್ರಕಟಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ವರದಿಯಾಗಿದೆ.

ಇನ್ನು ಪತ್ರಿಕೆಯೊಂದರಲ್ಲಿ ಅಮೆರಿಕ ಮಾನವ ಹಕ್ಕು ಕೌನ್ಸಿಲ್​​ನಿಂದ ಹೊರಬರುವ ಕುರಿತು ಕಾಲಂ ಪ್ರಕಟವಾಗಿತ್ತು. ಇದನ್ನು ವಿಶ್ವಸಂಸ್ಥೆಯ ಟೀಕಿಸಿತ್ತು. ವಿಶ್ವಸಂಸ್ಥೆಯ ನಿಲುವನ್ನು ನಿಕ್ಕಿ ಹ್ಯಾಲೆ ವಿರೋಧಿಸಿದ್ದರು. ವೆನಿಜುವೆಲಾ ಮತ್ತು ಕ್ಯೂಬಾ ದೇಶಗಳಿಗೆ ಮಾನವ ಹಕ್ಕು ಕೌನ್ಸಿಲ್​​ ಸದಸ್ಯತ್ವ ನೀಡಿದ ಕುರಿತು ಕೂಡ ಹ್ಯಾಲೆ ತಕರಾರು ತೆಗೆದಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮೆರಿಕ ವಿಶ್ವ ಸಂಸ್ಥೆಯ ಮಾನವ ಹಕ್ಕು ಕೌನ್ಸಿಲ್​​ನಿಂದ ಹೊರಬರುವ ಸಾಧ್ಯತೆ ಇದೆ.

0

Leave a Reply

Your email address will not be published. Required fields are marked *