ಜೈಪುರದಲ್ಲಿ ಕಾರ್​ ಏರಿದ ಕುದುರೆ: ಇಬ್ಬರಿಗೆ ಗಾಯ

ಜೈಪುರ: ಸಾಮಾನ್ಯವಾಗಿ ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸುವುದನ್ನು ಎಲ್ಲರೂ ಕೇಳಿರುತ್ತೀರಿ, ಕೆಲವೊಮ್ಮೆ ಸ್ವತಃ ಇಂಥಾ ದೃಶ್ಯಗಳಿಗೆ ಸಾಕ್ಷಿಯಾಗಿರುತ್ತೀರಿ. ಆದರೆ, ಇಲ್ಲೊಂದು ಅಪರೂಪದ ಅಪಘಾತ ನಡೆದಿದೆ. ಜೈಪುರದಲ್ಲಿ ಕುದುರೆಯೊಂದ ಕಾರ್​​ ಮೇಲೆ ಹಾರಿದ ಪ್ರಕರಣ ತಡವಾಗಿ ವರದಿಯಾಗಿದೆ. ನಿನ್ನೆ ಜೈಪರು ಕ್ಲಬ್​​ನ ಕುದುರೆಯೊಂದು ಆಕಸ್ಮಿಕವಾಗಿ ಚಲಿಸುತ್ತಿದ್ದ ಕಾರ್​​ ಮೇಲೆ ಚಂಗನೆ ನೆಗೆದಿದೆ. ಇದರ ಪರಿಣಾಮದಿಂದಾಗಿ, ಕಾರಿನ ಗಾಜು ಸಂಪೂರ್ಣವಾಗಿ ಜಖಂಗೊಂಡು, ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕಾರು ಚಾಲಕ ಮತ್ತು ಕುದುರೆಯನ್ನು ರಕ್ಷಿಸಲಾಗಿದೆ.

0

Leave a Reply

Your email address will not be published. Required fields are marked *