ವೈರಲ್ ಆದ ಐದು ವರ್ಷದ ಬಾಲಕನ ವೀಡಿಯೋ

ಲಂಡನ್: ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ಪಾರ್ಕ್ ಮಾಡಿದ ಪ್ರಕರಣದ ವಿಚಾರಣೆ ವೇಳೆ ಎಷ್ಟು ದಂಡ ವಿಧಿಸಬೇಕು ಎಂದು ನ್ಯಾಯಾಧೀಶರು 5 ವರ್ಷದ ಬಾಲಕನ ಅಭಿಪ್ರಾಯವನ್ನು ಕೇಳಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾನು 90, 60 ಅಥವಾ 30 ಡಾಲರ್ ದಂಡ ವಿಧಿಸಬಹುದು. ಅಥವಾ ದಂಡ ವಿಧಿಸದಿರಬಹುದು. ನಾನು ಏನು ಮಾಡಲಿ ಎಂದು ನೀನು ಬಯಸುತ್ತೀಯ? ಎಂದು ನ್ಯಾಯಾಧೀಶರು ಬಾಲಕ ಜೇಕಬ್​ನನ್ನು ಕೇಳುತ್ತಾರೆ. ಈ ವೇಳೆ ಬಾಲಕ 30 ಎನ್ನುತ್ತಾನೆ. ಅನಂತರ ಮತ್ತೊಂದು ಅವಕಾಶ ಕೊಟ್ಟ ಸಂದರ್ಭದಲ್ಲಿ ದಂಡ ವಿಧಿಸಬೇಡಿ ಎನ್ನುತ್ತಾನೆ. ಅನಂತರ ಉಪಹಾರ ಸೇವಿಸಿದ್ದೀಯ ಎಂದು ನ್ಯಾಯಾಧೀಶರು ಪ್ರಶ್ನಿಸುತ್ತಾರೆ. ಆಗ ಅವನು ಇಲ್ಲ ಎನ್ನುತ್ತಾನೆ. ನಂತರ ನ್ಯಾಯಾಧೀಶರು ನಿನಗೆ ನಿನ್ನ ತಂದೆ ಉಪಾಹಾರ ಕೊಡಿಸಿದರೆ ನಾನು ದಂಡದಿಂದ ವಿನಾಯಿತಿ ನೀಡುತ್ತೇನೆ ಎನ್ನುತ್ತಾರೆ.

ಇದಕ್ಕೂ ಮುನ್ನ ಬಾಲಕನೊಂದಿಗೆ ಸಹಜವಾಗಿ ಮಾತನಾಡುತ್ತಾ ನೀನು ದೊಡ್ಡವನಾದ ಮೇಲೆ ಯಾವ ಕೆಲಸ ಮಾಡುತ್ತೀಯ ಎಂಬ ಪ್ರಶ್ನೆಗೆ ಬಾಣಸಿಗನಾಗುತ್ತೇನೆ ಎನ್ನುತ್ತಾನೆ. ಅವನ ಪ್ರತಿಯೊಂದು ಉತ್ತರಕ್ಕೂ ನ್ಯಾಯಾಧೀಶರು ಸೇರಿದಂತೆ ಕೋರ್ಟ್​ ಹಾಲ್​​ನಲ್ಲಿದ್ದ ಎಲ್ಲರೂ ನಗೆಗಡಲಲ್ಲಿ ತೇಲುತ್ತಾರೆ.

ಅಮೆರಿಕದ ರೋಡ್ ದ್ವೀಪದ ಮುನ್ಸಿಪಲ್ ಕೋರ್ಟ್​​ನ ನ್ಯಾಯಾಧೀಶ 80 ವರ್ಷದ ಫ್ರಾಂಕ್ ಕಾಪ್ರಿಯೋ ತಂದೆಯ ತಪ್ಪಿಗೆ ಶಿಕ್ಷೆಯ ಪ್ರಮಾಣವನ್ನು ಮಗನಿಗೆ ಕೇಳಿದ್ದಾರೆ. ಈ ವೀಡಿಯೋವನ್ನು ಫೇಸ್​ಬುಕ್​​ನಲ್ಲಿ 8 ದಶಲಕ್ಷ ಜನ ವೀಕ್ಷಿಸಿದ್ದಾರೆ. ಮತ್ತು ಲಕ್ಷಾಂತರ ಕಾಮೆಂಟ್​​ಗಳು ಕೂಡ ವ್ಯಕ್ತವಾಗಿವೆ. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ವಿಚಾರಣೆಯನ್ನು ಸ್ಥಳೀಯ ವಾಹಿನಿಯೊಂದರಲ್ಲಿ ಪ್ರಸಾರ ಮಾಡಲಾಗಿತ್ತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *