ಹಿಂದೂ ರಾಷ್ಟ್ರದ ಜಪವನ್ನು ನಿಲ್ಲಿಸಿ: ಸಿದ್ಧಾರ್ಥ್

ಚೆನ್ನೈ: ಪ್ರಿಯ ಬಿಜೆಪಿ ನಿಮಗೆ ಅಧಿಕಾರ ಸಿಕ್ಕಿದೆ. ಭಾರತ ದೇಶಕ್ಕೆ ಶಕ್ತಿ ತುಂಬಿ. ಜನರ ವೈಯಕ್ತಿಕ ಆಯ್ಕೆಗಳಲ್ಲಿ ಕೈ ಹಾಕಬೇಡಿ. ಹಿಂದೂ ರಾಷ್ಟ್ರದ ಜಪವನ್ನು ನಿಲ್ಲಿಸಿ. ನಾವು ಅವುಗಳನ್ನೆಲ್ಲ ಮೀರಿದ್ದೇವೆ ಎಂದು ತಮಿಳು ನಟ ಸಿದ್ಧಾರ್ಥ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಗೋ ಮಾರಾಟ ಮತ್ತು ಗೋಮಾಂಸ ಕುರಿತು ನಿಲುವನ್ನು ಟೀಕಿಸಿದ್ದಾರೆ.

ದನದ ಮಾರುಕಟ್ಟೆ ವಿಷಯವನ್ನು ಅನಗತ್ಯವಾಗಿ ಚರ್ಚಿಸಲಾಗುತ್ತಿದೆ. ಜನರನ್ನು ಒಡೆಯಲು ಇದನ್ನು ಬಳಸಿಕೊಳ್ಳಲಾಗುತ್ತಿದೆ. ಗೋ ಹತ್ಯೆ ಕುರಿತು ರಾಜ್ಯ ಸರ್ಕಾರಗಳು ನಿರ್ಧರಿಸಬಹುದು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ದೂರ ಇರಬೇಕು ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ, ಐಐಟಿ ಮದ್ರಾಸ್ ಪಿಎಚ್.ಡಿ., ವಿದ್ಯಾರ್ಥಿ ಸೂರಜ್ ಮೇಲಿನ ಹತ್ಯೆಯನ್ನು ಖಂಡಿಸಿರುವ ಸಿದ್ಧಾರ್ಥ್, ವಿದ್ಯಾರ್ಥಿಯ ಮೇಲೆ ನಡೆದಿರುವ ಹಲ್ಲೆಯ ಫೋಟೋದೊಂದಿಗೆ ನಾವೆಲ್ಲ ಭಾರತೀಯರು. ಬದುಕಿ ಬದುಕಲು ಬಿಡಿ. ದ್ವೇಷವನ್ನು ಅಂತ್ಯಗೊಳಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *