ಶರಣಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ

ಶ್ರೀನಗರ: ಜಮ್ಮು ಕಾಶ್ಮೀರದ ಹಂದ್ವಾರದಲ್ಲಿ ಭಯೋತ್ಪಾದಕ ಡ್ಯಾನಿಷ್ ಅಹಮದ್, 21ನೇ ರಾಷ್ಟ್ರೀಯ ರೈಫಲ್ಸ್ ಪೊಲೀಸರಿಗೆ ಶರಣಾಗಿದ್ದಾನೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್​​ ಸಾಬ್ಜಾರ್​ ಭಟ್​ ಅಂತ್ಯಸಂಸ್ಕಾರದ ವೇಳೆ ಭಾಗವಹಿಸಿದ್ದ ವೀಡಿಯೋ ಲಭ್ಯವಾಗಿತ್ತು. ಟ್ರಾಲ್​​ನ ಆವಂತಿಪುರದಲ್ಲಿ ಮಾಧ್ಯಮದವರಿಂದ ಈ ವೀಡಿಯೋ ಸೆರೆಯಾಗಿತ್ತು. ಇನ್ನು ಡ್ಯಾನಿಷ್ ಅಹಮದ್, ಡೆಹ್ರಾಡೂನ್​​ನ ಡೂನ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಸ್ನಾತಕೋತ್ತರ ಕಾಲೇಜಿನಲ್ಲಿ ಬಿಎಸ್​.ಸಿ., ಅಂತಿಮ ವರ್ಷದಲ್ಲಿ ಅಧ್ಯಯನ ನಡೆಸುತ್ತಿದ್ದ. 2016ರಲ್ಲಿ ಹಂದ್ವಾರದ ಕಲ್ಲೆಸೆತ ಪ್ರರಕಣಗಳಲ್ಲಿ ಕೂಡ ಈತ ಭಾಗಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈತನನ್ನು ಈ ಹಿಂದೆ ಕೂಡ ಒಮ್ಮೆ ವಶಕ್ಕೆ ಪಡೆಯಲಾಗಿತ್ತು. ಆದರೆ, ಅವನ ಹಿನ್ನೆಲೆಯನ್ನು ಆಧರಿಸಿ ಬಿಡುಗಡೆ ಮಾಡಲಾಗಿತ್ತು. ಅನಂತರ ಹಂದ್ವಾರದಲ್ಲಿ ನಡೆಯುತ್ತಿರುವ ಗಲಭೆಯಲ್ಲಿ ಈತನ ಪಾತ್ರವಿರುವುದನ್ನು 21ನೇ ರಾಷ್ಟ್ರೀಯ ರೈಫಲ್ಸ್ ಪಡೆ ಪತ್ತೆಹಚ್ಚಿತ್ತು. ಆದ್ದರಿಂದ ಅವನ ಪೋಷಕರನ್ನು ವಿಚಾರಣೆ ನಡೆಸಿತ್ತು. ಮತ್ತು ಡ್ಯಾನಿಷ್​ಗೆ ಶರಣಾಗುವಂತೆ ಸೂಚನೆ ನೀಡಲಾಗಿತ್ತು.

ಪೋಷಕರು ಶರಣಾಗುವಂತೆ ತಮ್ಮ ಪುತ್ರನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶರಣಾಗತಿಯ ನಂತರ ನಡೆಸಿದ ವಿಚಾರಣೆ ವೇಳೆ ಡ್ಯಾನಿಷ್, ದಕ್ಷಿಣ ಕಾಶ್ಮೀರದ ಭಯೋತ್ಪಾದಕರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನೆ ನೀಡಿದ್ದರಿಂದ ಭಯೋತ್ಪಾದನೆಯಲ್ಲಿ ತೊಡಗಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಉತ್ತರ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮ್ಯಾಂಡರ್​ಗಳು ಸಕ್ರಿಯವಾಗಿದ್ದು, ಕೆಲವು ಯುವಕರ ಮೂಲಕ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಇದನ್ನು ದಕ್ಷಿಣ ಕಾಶ್ಮೀರದಲ್ಲಿ ಕೂಡ ಪಸರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾನೆ. ಆದರೆ, ಕೆಲವು ದಿನಗಳ ಕಾಲ ಭಯೋತ್ಪಾಕರೊಂದಿಗೆ ಇದ್ದ ನಂತರ ಅವರು ನಡೆಸುತ್ತಿರುವ ಕ್ರಿಯೆ ನಿಷ್ಫಲವಾದುದು ಎಂದು ಮನವರಿಕೆಯಾಗಿರುವುದಾಗಿ ಕೂಡ ಅವರು ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ಡ್ಯಾನಿಷ್ ಅಹಮದ್ ವಿರುದ್ಧ ಹಂದ್ವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ಕೂಡ ಪ್ರಗತಿಯಲ್ಲಿದೆ. ಜಮ್ಮು ಕಾಶ್ಮೀರದ ಶರಣಾಗತ ಉಗ್ರಗಾಮಿಗಳ ಪುನರ್ವಸತಿ ನೀತಿಯಡಿ ಡ್ಯಾನಿಷ್​​ನನ್ನು ಪರಿಗಣಿಸಲಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *