ದಕ್ಷಿಣದಲ್ಲಿ ನೆರೆ, ಉತ್ತರದಲ್ಲಿ ನೆರೆಯೊಂದಿಗೆ ಧೂಳ್ಮೋಡದ ಹಾವಳಿ

ದೆಹಲಿ/ತಿರುವನಂತಪುರ/ಜೈಪುರ: ರಾಜಧಾನಿ ದೆಹಲಿಯಲ್ಲಿ ಇದ್ದಕ್ಕಿದ್ದಂಥೆ ಮಾಲಿನ್ಯ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಜಪಥ್, ಲೋಧಿ ಮೊದಲಾದ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿದೆ. ಇದರಿಂದಾಗಿ ಜನ ಸಂಚಾರಕ್ಕೂ ಕಷ್ಟ ಪಡುವಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ಆರೋಗ್ಯದ ಮೇಲೆ ಕೂಡ ಗಂಭೀರವಾದ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದೆ.

ದೆಹಲಿಯ ಆರ್​ಕೆ ಪುರಂ, ಮಂದಿರ ಮಾರ್ಗ, ದ್ವಾರಕಾ, ಪಂಜಾಬಿ ಬಾಘ್, ಐಟಿಒ ಮೊದಲಾದ ಪ್ರದೇಶಗಳಲ್ಲಿ ದಟ್ಟವಾದ ಧೂಳ್ಮೋಡ ಆವರಿಸಿದೆ. ಇದರೊಂದಿಗೆ ರಾಜಸ್ಥಾನದ ಬಿಕಾನೇರ್ ಪ್ರದೇಶದಲ್ಲಿ ಕೂಡ ಧೂಳು ಆವರಿಸಿಕೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.

ಕೇರಳದ ಕೋಯಿಕ್ಕೋಡ್, ಕಣ್ಣೂರಿನಲ್ಲಿ ಭಾರೀ ಮಳೆ ಸುರಿದಿದ್ದು, ಮಳೆಗೆ 9 ವರ್ಷದ ಬಾಲಕಿ ಬಲಿಯಾಗಿದ್ದಾಳೆ. ಜೊತೆಗೆ, ಮಳೆಯಿಂದ ಕನಿಷ್ಠ 10 ನಾಗಕರಿಕರು ನಾಪತ್ತೆಯಾಗಿದ್ದಾರೆ. ಕೋಯಿಕ್ಕೋಡ್, ಕಣ್ಣೂರಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.

ತ್ರಿಪುರಾವನ್ನು ಕೂಡ ಎಡೆಬಿಡದೆ ಸುರಿಯುತ್ತಿರುವ ಮಳೆ ಬಾಧಿಸಿದ್ದು, ಸಿಎಂ ವಿಪ್ಲವ್ ಕುಮಾರ್ ದೇವ್, ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿದೆ ಚರ್ಚೆ ನಡೆಸಿದ್ದು, ಕೇಂದ್ರದಿಂದ ಸೇನೆ ಮತ್ತು ರಕ್ಷಣಾ ಪಡೆಗಳನ್ನು ಕಳುಹಿಸುವಂತೆ ಮನವಿ ಮಾಡಿದ್ದಾರೆ. ರಾಷ್ಟ್ರೀಯ ವಿಪತ್ತ ನಿರ್ವಹಣಾ ಪಡೆಯನ್ನು ಕೂಡ ನೆರವಿಗಾಗಿ ಕಳುಹಿಸುವಂತೆ ಬೇಡಿಕೆ ಇಟ್ಟಿದ್ದಾರೆ.

ಅಸ್ಸಾಂನಲ್ಲಿ ಸುರಿದ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿದ್ದು ಲುಮ್ದಿಂಗ್ – ಬದರ್​ಪುರ ಗುಡ್ಡ ಪ್ರದೇಶದಲ್ಲಿ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಇದುವರೆಗೆ ಯಾವುದೇ ಪ್ರಯಾಣಿಕರು, ಭೂಕುಸಿತದಲ್ಲಿ ಸಿಲುಕಿಕೊಂಡಿಲ್ಲ ಎಂದಿರುವ ಅಧಿಕಾರಿಗಳು, ಸಂಚಾರಕ್ಕೆ ಅನುವು ಮಾಡಿಕೊಡಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *