ಸಿಲಿಕಾನ್ ಸಿಟಿಯಲ್ಲಿ ಮಳೆಯ ಆರ್ಭಟ…

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಧಾರಾಕಾರ ಮಳೆಯಾಗಿದೆ. ಸುಮಾರು 1 ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆ ಸೂರ್ಯನ ಕಡುತಾಪದಿಂದ ಕಂಗೆಟ್ಟಿದ್ದ ಐಟಿಸಿಟಿಗೆ ತಂಪೆರದಿದೆ. ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಭಾರಿ ಮಳೆಯಾಗಿದ್ದು, ಜನಜೀವನವನ್ನು ಏರುಪೇರುಗೊಳಿಸಿತು. ಪ್ರಮುಖ ಏರಿಯಾಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನಸವಾರರು ಪರದಾಡುವಂತಾಯಿತು. ಎಚ್.ಎಸ್.ಆರ್ ಲೇಔಟ್ ಸೇರಿದಂತೆ ವಿವಿದೆಡೆ ರಸ್ತೆಗಳಲ್ಲಿ ನೀರು ನಿಂತುಕೊಂಡಿದ್ದರಿಂದ ಕೆಲಕಾಲ ವಾಹನಗಳು ಮುಂದೆ ಚಲಿಸಿದ ಸ್ಥಿತಿ ನಿರ್ಮಾಣವಾಗಿತ್ತು. ತಡರಾತ್ರಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಮೇಯರ್ ಸಂಪತ್ ರಾಜ್ ಎಚ್,ಎಸ್,ಆರ್, ಬಡವಾಣೆಗೆ ಭೇಟಿ ನೀಡಿ ಪರಿಶೀಲಿಸಿದರು. ಎನ್,ಡಿ,ಆರ್.ಎಫ್ ಮತ್ತು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಳೆನೀರನ್ನು ತೆರವುಗೊಳಿಸುವ ಮೂಲಕ ವಾಹನಸಂಚಾರವನ್ನು ಸುಗಮಗೊಳಿಸಿದರು….

0

Leave a Reply

Your email address will not be published. Required fields are marked *