ಚಿಕ್ಕಮಗಳೂರಿನಲ್ಲಿ ಐದನೇ ದಿನವು ವರುಣನ ಅಬ್ಬರ

ಮಲೆನಾಡಿನಲ್ಲಿ ಐದನೇ ದಿನವೂ ವರುಣನ ಅಬ್ಬರ ಮುಂದುವರೆದಿದೆ. ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಮಿನಿ ಡ್ಯಾಂ ಗಳು ಭರ್ತಿಯಾಗಿದ್ದು, ಎನ್.ಆರ್.ಪುರ ತಾಲೂಕಿನ ಹಬ್ಬಿ ಡ್ಯಾಂ ಭರ್ತಿಯಾಗಿದೆ. ಇನ್ನು ನದಿಪಾತ್ರದ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ. ಇನ್ನು ಮೂಡಿಗೆರೆ ತಾಲೂಕಿನ ಮಂಡಗದ್ದೆ ಗ್ರಾಮದಲ್ಲಿ ತೂಗು ಸೇತುವೆ ಮುಳುಗುವ ಭೀತಿ ಎದುರಾಗಿದೆ. ಭದ್ರಾ ನದಿಗೆ ಸೇರುವ ಉಪ ನದಿಗೆ  ಬಿದಿರಿನಿಂದ ಗ್ರಾಮಸ್ಥರೇ ತೂಗು ಸೇತುವೆ ಕಟ್ಟಿಕೊಂಡಿದ್ದರು.ಹಲವು ವರ್ಷಗಳಿಂದ ಗ್ರಾಮಕ್ಕೆ ಈ ತೂಗು ಸೇತುವೆಯೇ ರಸ್ತೆಯಾಗಿದ್ದು, ಭಾರಿ ಮಳೆಯಿಂದ ತೂಗು ಸೇತುವೆ ಮುಳುಗುವ ಆತಂಕವಿದೆ…..

0

Leave a Reply

Your email address will not be published. Required fields are marked *