ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರಿದ ಮಳೆ ಅಬ್ಬರ

ಚಿಕ್ಕಮಗಳೂರಿನ ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಮಲೆನಾಡಿನ ಜನ ತತ್ತರಿಸಿ ಹೋಗಿದ್ದಾರೆ. ನಿನ್ನೆ ಸೃಷ್ಟಿಸಿದ ಮಳೆ ಅವಾಂತರಕ್ಕೆ ಕೊಪ್ಪ ತಾಲೂಕಿನ ಬಸ್ತಿ ಕೆರೆಯಲ್ಲಿ ಅಶೋಕ್ ಎಂಬ ಯುವಕ ಕೊಚ್ಚಿ ಹೋಗಿದ್ದು ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.. ಕಾರ್ಯಾಚರಣೆ ವೇಳೆ ಯವಕನ ಬೈಕ್​ ಅನ್ನು ಕೆರೆಯಿಂದ ಮೇಲತ್ತಲಾಗಿತ್ತು. ಇಂದು ಕೂಡ ಮೃತ ದೇಹಕ್ಕೆ ಕಾರ್ಯಾಚರಣೆ ಮುಂದುವರಿದಿದ್ದು ಕಾರ್ಯಚರಣೆಗೆ ಮಳೆ ಅಡ್ಡಿಯಾಗುತ್ತಿದೆ. ಎನ್​ಡಿಆರ್​​ಎಫ್ ತಂಡ, ಜಯನಗರ ಪೊಲೀಸರು, ಅಗ್ನಿಶಾಮಕದಳದಿಂದ ಕಾರ್ಯಾಚರಣೆ ಮುಂದುವರಿದಿದೆ. ಇನ್ನು ಕಳಸ, ಶೃಂಗೇರಿ, ಕುದುರೆಮುಖದಲ್ಲಿ ಭಾರೀ ಮಳೆಯಾಗಿದೆ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಾಗಿದೆ..

0

Leave a Reply

Your email address will not be published. Required fields are marked *