ಕೈಲಾಶ್ ಖೇರ್, ತೋಷಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ವರ್ಷಾ ಸಿಂಗ್

ಮುಂಬೈ: ನಾನು ಕೈಲಾಶ್ ಖೇರ್ ಅವರನ್ನು ದೈವದ ಸ್ಥಾನದಲ್ಲಿರಿಸಿದ್ದೆ ಎಂದು ಲೈಂಗಿಕ ಕಿರುಕುಳ ಆರೋಪ ಹೊರಿಸಿರುವ ಗಾಯಗಿ ವರ್ಷಾ ಸಿಂಗ್ ಧನೋವಾ ಹೇಳಿದ್ದಾರೆ. ಅವರನ್ನು ನಾನು 2015ರಲ್ಲಿ ಮೊಟ್ಟ ಮೊದಲ ಬಾರಿ ದುಬೈ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದೆ. ಆಗ ನಾವಿಬ್ಬರು ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದೆವು. ಅದೇ ವೇಳೆ ಪರಸ್ಪರರು ಮೊಬೈಲ್​ ನಂಬರ್​ಗಳನ್ನು ಪಡೆದಿದ್ದೆವು. ಒಂದು ದಿನ ಅವರು ನನಗೆ ಕರೆ ಮಾಡಿ, ಭೇಟಿಯಾಗಲು ಹೇಳಿದರು. ನನ್ನ ಹೆಸರು ಚನ್ನಾಗಿದೆ ಮತ್ತು ನಾನು ನಿನ್ನನ್ನು ಪ್ರೇಮಿಸುತ್ತೇನೆ ಎಂದು ಅವರು ಹೇಳಿದರು ಎಂದಿದ್ದಾರೆ.

ಒಮ್ಮೆ ನಾವಿಬ್ಬರೂ ಕಾರಿನಲ್ಲಿ ಹೋಗುತ್ತಿದ್ದೆವು. ಸಂಗೀತ ನಿರ್ದೇಶಕ ತೋಷಿಯವರಿಗೆ ಹಾಡುಗಳ ರೆಕಾರ್ಡಿಂಗ್ ಯಾವಾಗ ಎಂದು ಕೇಳಿದೆ. ನಾವು ಮೇಲಿನ ಮಹಡಿಗೆ ಶೀಘ್ರದಲ್ಲೇ ಹೋಗುತ್ತೇವೆ ಮತ್ತು ರೆಕಾರ್ಡ್ ಮಾಡುತ್ತೇವೆ ಎಂದರು. ನಂತರ ಒಂದು ಬಾಟಲ್ ಹೊರತೆಗೆದರು ಮತ್ತು ಕಾರಿನಲ್ಲಿ ಮದ್ಯಪಾನ ಮಾಡತೊಡಗಿದರು. ಅವರು ನನ್ನ ತೊಡೆಗಳನ್ನು ಸ್ಪರ್ಶಿಸಿದರು. ಇದು ತಪ್ಪು ಎಂದು ನಾನು ಅವರಿಗೆ ಹೇಳಿದೆ ಎಂದು ಕಿರುಕುಳ ನೀಡಿದ ವಿಷಯವನ್ನು ವಿವರಿಸಿದ್ದಾರೆ.

ತೋಷಿ ಇದನ್ನು ಪುನರಾವರ್ತಿಸಬಾರದು ಎಂದರು. ನಾವು ಮೇಲ್ಮಹಡಿಗೆ ಹೋದೆವು ಮತ್ತು ನಾವು ಅಲ್ಲಿ ಏಕಾಂತದಲ್ಲಿರುವ ಅನುಭವ ನನಗೆ ಆಯಿತು. ಆಗ ಅವರು ನನಗೆ ಪ್ರೀತಿ ಮಾಡುವುದಾಗಿ ಹೇಳಿದರು ಮತ್ತು ನನಗೆ ಬಹಳ ಬಲವಂತ ಮಾಡಿದರು. ನಾನು ಈಗಾಗಲೇ ಬೇರೆಯವರನ್ನು ಪ್ರೀತಿಸುತ್ತಿರುವುದಾಗಿ ಹೇಳಿದೆ. ಆದರೆ, ಈಗ ಅವರು ನನ್ನ ಆರೋಪಗಳೆಲ್ಲ ನಿರಾಧಾರ ಎನ್ನುತ್ತಿದ್ದಾರೆ ಎಂದು ಅವರು ಹೇಳಿದರು.

0

Leave a Reply

Your email address will not be published. Required fields are marked *