ಒಟ್ಟೊಟ್ಟಿಗೆ ಅಪ್ಪ-ಮಗನ ನಟನೆ….

ಬಾಲಿವುಡ್‌ ನಟ ಅನಿಲ್‌ ಕಪೂರ್‌ , ಮತ್ತವರ ಪುತ್ರ ಹರ್ಷವರ್ಧನ್‌ ಕಪೂರ್‌ ಚಿತ್ರವೊಂದರಲ್ಲಿ ಒಟ್ಟೊಟ್ಟಿಗೆ ನಟಿಸಲಿದ್ದಾರೆ. ಕಣ್ಣನ್ ಅಯ್ಯರ್‌ರ ಮುಂದಿನ ಸಿನಿಮಾಕ್ಕೆ ತಂದೆ ಮಗ ಸಹಿ ಹಾಕಿದ್ದಾರೆ. ಒಲಿಂಪಿಕ್‌ ವಿಜೇತ ಶೂಟರ್‌ ಅಭಿನವ್‌ ಬಿಂದ್ರಾ ಜೀವನ ಚರಿತ್ರೆ ಆಧರಿಸಿದ ಈ ಸಿನಿಮಾದಲ್ಲಿ  ಅನಿಲ್‌ಕಪೂರ್‌ ಹಾಗೂ ಹರ್ಷವರ್ಧನ್‌ ತಂದೆ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಹರ್ಷರ್ಧನ್‌ ಅಭಿನವ್‌ ಬಿಂದ್ರಾನ ಪಾತ್ರ ನಿಭಾಯಿಸಿದರೆ, ಅನಿಲ್‌ ಕಪೂರ್‌ ಅಭಿನವ್‌ ತಂದೆ ಎ ಎಸ್‌ ಬಿಂದ್ರಾರ ಪಾತ್ರ ನಿಭಾಯಿಸಲಿದ್ದಾರೆ. ತಂದೆ ಮಗ ಇಬ್ಬರೂ ಶೂಟಿಂಗ್‌ ಆರಂಭವಾಗುವ ಮುನ್ನ ಅಭಿನವ್‌ ಬಿಂದ್ರಾರನ್ನು ಭೇಟಿಯಾಗಿ ಅವರ ಜೀವನದ ಬಗ್ಗೆ ತಿಳಿಯಲು ನಿರ್ಧರಿಸಿದ್ದಾರೆ.

0

Leave a Reply

Your email address will not be published. Required fields are marked *