Happy Birthaday Sachin: 51ನೇ ವಸಂತಕ್ಕೆ ಕಾಲಿಟ್ಟ ಸಚಿನ್‌ ತೆಂಡೂಲ್ಕರ್

Happy Birthday Sachin Tendulkar : ಭಾರತದ ಕ್ರಿಕೆಟ್ ಜಗತ್ತು ಕಂಡ ಅಪ್ರತಿಮ ವೀರ ಸಚಿನ್ ತೆಂಡೂಲ್ಕರ್​ ಅವರು ಇಂದು 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ

ಮುಂಬೈ : ಭಾರತದ ಕ್ರಿಕೆಟ್ ಜಗತ್ತು ಕಂಡ ಅಪ್ರತಿಮ ವೀರ, ದಾಖಲೆಗಳ ಮಹಾಶೂರ ಸಚಿನ್ ತೆಂಡೂಲ್ಕರ್​ ಅವರು ಇಂದು 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ತಲೆ ಬಗ್ಗಿಸಿ ಆಡತೊಡಗಿದರೆ ಚಂಡು ಜಿಗಿಯುತ್ತದೆ. ಪುಟಿಯುತ್ತದೆ. ಹಾರುತ್ತದೆ. ಜೊತೆಗೆ ಕ್ರಿಕೆಟ್ ಎನ್ನುವುದು ಒಂದು ಕಲೆ ಎಂಬುದನ್ನು ತೋರಿಸಿಕೊಟ್ಟವರ ಪಟ್ಟಿಗೆ ಸಚಿನ್ ಸೇರುತ್ತಾರೆ.

ಅವರು ಎಂತಹ ಆಟಗಾರರು ಎಂದರೆ ಅವರ ದಾಖಲೆಗಳ ಪಟ್ಟಿ ನೀಡಿದರೆ ಏನೂ ಹೇಳಿದಂತೆ ಆಗುವುದಿಲ್ಲ.
ಯಾಕೆಂದರೆ ಕೆಲವೊಬ್ಬರ ಸಾಧನೆಗಳನ್ನು ಹೇಳಲು ದಾಖಲೆಗಳು ಬೇಕು. ಕೆಲವರ ಮುಂದೆ ದಾಖಲೆಗಳೂ ಸಹ ತಲೆ ತಗ್ಗಿಸಿ ನಿಂತುಬಿಡುತ್ತದೆ. ದಾಖಲೆಯೇ ಹೇಳುತ್ತದೆ, ನಿನ್ನ ಮುಂದೆ ನಾನೂ ಸಣ್ಣವನು. ಸಚಿನ್ ಅಂತವರ ಸಾಲಿಗೆ ಸೇರಿದವರು.

Author

error: