ರಜತ ಮಹೋತ್ಸವ ಸಂಭ್ರಮದಲ್ಲಿ ಹಂಪಿ ಕನ್ನಡ ವಿವಿ

ಅದು ನಾಡು-ನುಡಿಗಾಗಿಯೇ ಹುಟ್ಟಿಕೊಂಡ ಏಕೈಕ ವಿಶ್ವವಿದ್ಯಾಲಯ. ಕನ್ನಡ ಭಾಷೆಯ ರಕ್ಷಣೆಗಾಗಿ ಹುಟ್ಟಿಕೊಂಡ ವಿಶ್ವವಿದ್ಯಾಲಯ ೨೫ ವಸಂತಗಳನ್ನ ಪೂರೈಸಿದ್ದು,ಇದೀಗ ಬೆಳ್ಳಿಹಬ್ಬ ಸಂಭ್ರಮದ ಹೊಸ್ತಿಲಲ್ಲಿದೆ . ನಾಡು ,ನುಡಿಯ ಉಳಿವಿಗೆ ಹುಟ್ಟಿಕೊಂಡ ವಿಶ್ವವಿದ್ಯಾಲಯ ಅಂದ್ರೆ ಅದು ಹಂಪಿ ಕನ್ನಡ ವಿವಿ. ಈವರೆಗೂ ಎರಡು ಸಾವಿರ ಪುಸ್ತಕಗಳನ್ನು ಹೊರ ತಂದಿರುವ ಹೆಗ್ಗಳಿಕೆ ಇದ್ರದ್ದು.  ಅಂದಹಾಗೇ ಈ ಹಂಪಿ ಕನ್ನಡ ವಿವಿಯೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. 700 ಎಕರೆ ಪ್ರದೇಶದಲ್ಲಿ 1992ರಲ್ಲಿ ನಿರ್ಮಾಣವಾಗಿರೋ ಈ ವಿವಿಗೆ ಭೌತಿಕವಾಗಿ ಭದ್ರಬುನಾದಿ ಹಾಕಿದ ಹೆಗ್ಗಳಿಕೆ ಮೊದಲ ಕುಲಪತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರಿಗೆ ಸಲ್ಲುತ್ತೆ. ಕನ್ನಡದ ಆಶಯ ಸ್ವರೂಪಕ್ಕೆ ಅನುಗುಣವಾಗಿಯೇ ವಿವಿ ಚಟುವಟಿಕೆಯನ್ನು ನಡೆಸಿಕೊಂಡು ಬಂದಿದೆ.

ಈ ವಿಶ್ವವಿದ್ಯಾನಿಲಯ ಕನ್ನಡ ಭಾಷೆಯ ಉಳಿವಿಗಾಗಿ ಸಾಹಿತಿಗಳಾದ ಎಂ.ಎಂ.ಕಲ್ಬುರ್ಗಿ, ಕಂಬಾರರು, ವಿವೇಕಯ್ಯ, ಮುರುಗೆಪ್ಪ ಸೇರಿದಂತೆ ಹಲವರು ಶ್ರಮಿಸಿದ್ದಾರೆ. ಸಾಕಷ್ಟು ಮಂದಿಗೆ ಈ ವಿಶ್ವವಿದ್ಯಾಲಯ, ನಾಡೋಜ ಹಾಗೂ ಪದವಿಗಳನ್ನು ಪ್ರದಾನ ಮಾಡಿದೆ. ವಿವಿ ನಾಳೆ ರಜತ ಮಹೋತ್ಸವ ಆಚರಿಸಿಕೊಳ್ತಿದ್ದು, ಒಂದು ವಾರಗಳ ಕಾಲ ಇಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಇದೇ ವೇಳೆ ವಿವಿ ಪ್ರಕಟಿಸಿರುವ ಪುಸ್ತಕಗಳನ್ನ ಶೇ.50ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬೆಳ್ಳಿ ಹಬ್ಬದ ನಿಮಿತ್ತ ವಿವಿ ಆವರಣವನ್ನು ಮಧುವಣಗಿತ್ತಿಯಂತೆ ಸಿದ್ಧಗೊಳಿಸಲಾಗಿದೆ. ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಸಾಹಿತ್ಯಾಸಕ್ತರು ವಿವಿಯತ್ತ ಧಾವಿಸುತ್ತಿದ್ದು, ಈ ಮಹೋತ್ಸವ ಇತಿಹಾಸದ ಪುಟಗಳಲ್ಲಿ ಚಿರಸ್ಮರಣೀಯವಾಗಿ ಉಳಿಯಲಿದೆ.
ನೂರುಲ್ಲಾ ಸುದ್ದಿ ಟಿವಿ ಬಳ್ಳಾರಿ

0

Leave a Reply

Your email address will not be published. Required fields are marked *