ಗೋವಾ ಸಿಎಂ ಬದಲಾವಣೆಗೆ ಬಿಜೆಪಿ ಒಲವು

ಪಣಜಿ: ಗೋವಾದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಬಿಜೆಪಿ ಸಿದ್ಧವಾಗಿದೆ. ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಿಎಂ ಮನೋಹರ್ ಪರಿಕ್ಕರ್ ಅವರನ್ನು ಬದಲಿಸಲು ವೇದಿಕೆ ಸಿದ್ಧವಾಗಿದ್ದು, ಬಿಜೆಪಿಯೊಂದಿಗೆ ಷರತ್ತು ಬದ್ಧ ವಿಲೀನಕ್ಕೆ ಎಂಎಜಿ ಪಕ್ಷ ಸಮ್ಮತಿ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ಬಿಜೆಪಿ ನಿರತವಾಗಿದೆ. ಮುಂದಿನ ಸೋಮವಾರ ರಾಮ್ ಲಾಲ್ ಮತ್ತು ಬಿ.ಎಲ್.ಸಂತೋಷ್ ಗೋವಾಕ್ಕೆ ಭೇಟಿ ನೀಡಿ ಶಾಸಕಾಂಗ ಪಕ್ಷದ ಮುಂದಿನ ನಾಯಕನ ಆಯ್ಕೆಯ ಉಸ್ತುವಾರಿ ವಹಿಸಲಿದ್ದಾರೆ.

2017ರ ಬಲಾಬಲ

ಪಕ್ಷ                         ಕ್ಷೇತ್ರ                           2012ರ ಬಲಾಬಲ

ಕಾಂಗ್ರೆಸ್                  17                                  9
ಬಿಜೆಪಿ                      13                                  21
ಎಂಜಿಪಿ                     3                                    3
ಜಿಎಫ್​​ಪಿ                   3                                     2
ಪಕ್ಷೇತರ                   3                                     5
ಎನ್​​ಸಿಪಿ                  1                                      0
ಒಟ್ಟು                      40                                   40
ಬಹುಮತಕ್ಕೆ ಅಗತ್ಯ ಬಲ 21

ಅನಾರೋಗ್ಯದಿಂದ ಬಳಲುತ್ತಿದ್ದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಕ್ಯಾಂಡೋಲಿಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ವಿಧಾನಸಭೆಯ ಉಪಾಧ್ಯಕ್ಷ ಲೊಬೋ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರನ್ನು ನಿನ್ನೆ ಮಧ್ಯಾಹ್ನ ಕ್ಯಾಂಡೋಲಿಮ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ. ಪರಿಕ್ಕರ್ ಅವರು ಪ್ಯಾಂಕ್ರಿಯಾಟಿಕ್ ಕಾಯಿಲೆಯಿಂದ ಬಳಲುತ್ತಿದ್ದು, ಈ ವರ್ಷದ ಆರಂಭದಲ್ಲೇ ಅವರು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೆರಿಕಾಗೆ ಚಿಕಿತ್ಸೆಗಾಗಿ ತೆರಳಿದ್ದ ಅವರು ಸತತ ಮೂರು ತಿಂಗಳ ಕಾಲ ಚಿಕಿತ್ಸೆ ಪಡೆದು ಕಳೆದ ಜೂನ್ ತಿಂಗಳಲ್ಲಿ ಮರಳಿದ್ದರು.

ವಿಪಕ್ಷ ಕಾಂಗ್ರೆಸ್ ಸಿಎಂ ಪರಿಕ್ಕರ್ ಅನಾರೋಗ್ಯದಿಂದಾಗಿ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಆರೋಪಿಸಿದೆ. ಅಲ್ಲದೇ, ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಕಾಂಗ್ರೆಸ್ ಪಟ್ಟು ಹಡಿದಿದೆ. ಹಿನ್ನೆಲೆಯಲ್ಲಿ ಬಿಜೆಪಿ ಹೊಸ ಸಿಎಂ ನೇಮಿಸಲು ಮುಂದಾಗಿದೆ. ಅಲ್ಲದೇ, ಸಿಎಂ ಸ್ಥಾನ ನಿರ್ವಹಿಸಲು ಸ್ವತಃ ಪರಿಕ್ಕರ್ ನಿರಾಕರಿಸದ್ದಾರೆ ಎಂದು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಅಮಿತ್ ಶಾ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಗೋವಾದಲ್ಲಿ ಹೊಸ ಸಿಎಂ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.

0

Leave a Reply

Your email address will not be published. Required fields are marked *