ಹಂದಿ ಮಾಂಸದ ಮೇಳ ಆಯೋಜಿಸಲು ಕರೆ ನೀಡಿದ ಕೇಂದ್ರ ಸಚಿವ

ನವದೆಹಲಿ: ಗೋ ಮಾಂಸ ಮೇಳ ಆಯೋಜಿಸಿದ ಮದ್ರಾಸ್ ಐಐಟಿ ವಿದ್ಯಾರ್ಥಿಗಳಿಗೆ ಹಂದಿ ಮಾಂಸ ಮೇಳವನ್ನು ಆಯೋಜಿಸಿ ಕೇಂದ್ರ ಕೃಷಿ ಸಚಿವ ಗಿರಿರಾಜ್ ಸಿಂಗ್ ಸವಾಲೊಡ್ಡಿದ್ದಾರೆ. ಕೆಲವು ಕಾಂಗ್ರೆಸ್ ಸಿಎಂಗಳು ಮತ್ತು ಮತ ಮಾರಾಟಗಾರರು ಕೇಂದ್ರ ಸರ್ಕಾರದ ಗೋ ಮಾರಾಟ ಕುರಿತು ಹೊರಡಿಸಿರುವ ಹೊಸ ಅಧಿಸೂಚನೆಯನ್ನು ವಿರೋಧಿಸುತ್ತಿದ್ದಾರೆ. ಮುಸ್ಲಿಮರನ್ನು ಓಲೈಸುವ ಸಲುವಾಗಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಕೂಡ ಅವರು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ, ಸಹಿಷ್ಣುತೆಯನ್ನು ಹಾಳುಮಾಡಲು ಕೆಲವು ಸಿಎಂಗಳು ಯತ್ನಿಸುತ್ತಿದ್ದಾರೆ ಎಂದು ಕೂಡ ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಗೋ ಮಾಂಸ ಮೇಳವನ್ನು ಆಯೋಜಿಸುವ ಮೂಲಕ ಕಿಡಿ ಹಚ್ಚಿದೆ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಗೋಹತ್ಯೆಯನ್ನು ನಿಷೇಧಿಸಿತ್ತು. ಈಗ ಮುಸ್ಲಿಮರನ್ನು ಓಲೈಸುವ ಸಲುವಾಗಿ ಪಕ್ಷದ ಕಚೇರಿಯ ಎದುರೇ ಸಾರ್ವಜನಿಕವಾಗಿ ಗೋಹತ್ಯೆ ಮಾಡಿದೆ. ಅಲ್ಲದೇ, ಗೋಮಾಂಸ ಮೇಳವನ್ನು ಆಯೋಜಿಸುತ್ತಿದೆ ಎಂದರು. ಆದರೆ, ಓಲೈಕೆಯಿಂದ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಕೂಡ ಅವರು ಅಭಿಪ್ರಾಯಪಟ್ಟರು.

ಮಮತಾ ಬ್ಯಾನರ್ಜಿಯವರು ಭಾರತೀಯ ಸಂವಿಧಾನದಲ್ಲಿ ನಂಬಿಕೆ ಇದೆಯೋ ಇಲ್ಲವೋ ಎಂದು ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು. ಸಂವಿಧಾನದಲ್ಲಿ ಅವರಿಗೆ ನಂಬಿಕೆ ಇಲ್ಲವೆಂದಾದಲ್ಲಿ ಇಂಥವರು ಏನು ಮಾಡಬೇಕೆಂದು ನಾನು ಆನಂತರ ಹೇಳುತ್ತೇನೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರ ವಿರುದ್ಧ ಕಿಡಿಕಾರಿದರು.

ಐಐಟಿ ಮದ್ರಾಸ್​​ನಲ್ಲಿ ಆಯೋಜಿಸಿದ್ದ ಗೋಮಾಂಸ ಮೇಳದ ಕುರಿತು ಪ್ರತಿಕ್ರಿಯಿಸಿದ ಅವರು, ಮದ್ರಾಸ್ ಐಐಟಿಯಲ್ಲಿ ಹಂದಿ ಮಾಂಸ ಮೇಳವನ್ನು ಆಯೋಜಿಸಿದ್ದಾರಾ? ಎಂದು ಪ್ರಶ್ನಿಸಿದರು.

ಹಿಂದೂಗಳು ಮತ ಬ್ಯಾಂಕ್ ಆಗುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ರಾಜಕೀಯ ಪಕ್ಷಗಳು ಹಿಂದೂಗಳ ಭಾವನೆಗಳ ಕುರಿತು ಯಾವುದೇ ಗೌರವವನ್ನು ಹೊಂದಿಲ್ಲ. ಹಿಂದೂಗಳು ಮತಬ್ಯಾಂಕ್ ಆಗದಿರುವುದರಿಂದಲೇ, ಅವರ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ ಎಂದು ಕೂಡ ಅವರು ಅಭಿಪ್ರಾಯಪಟ್ಟರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *