ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಗೌತಮ್ ಗಂಭೀರ್

ತನ್ನ ಹೆಸರನ್ನು ಬಳಸಿಕೊಂಡು ಬಾರ್ ಮಾಲೀಕರೊಬ್ಬರು ಮಧ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ದೆಹಲಿಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬಾರ್ ಗೆ ಗೌತಮ್ ಗಂಭೀರ್ ಎಂದು ಟ್ಯಾಗ್ ಲೈನ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನನ್ನ ಹೆಸರನ್ನು ಬಳಿಸಿಕೊಂಡು ಮಧ್ಯ ಮಾರಾಟಕ್ಕೆ ಪ್ರಚೋದನೆ ನೀಡಿದಂತೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ನ್ಯಾಯಾಲಯವನ್ನು ಗಂಭೀರ್ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೋರ್ಟ್ ಬಾರ್ ಮಾಲೀಕರಿಗೆ ನೋಟಿಸ್ ನೀಡಿದೆ. ಇನ್ನು ಪಂಜಾಬ್ ಮೂಲದ ಬಾರ್ ನ ಮಾಲೀಕನ ಹೆಸರು ಸಹ ಗೌತಮ್ ಗಂಭೀರ್ ಎಂದಾಗಿದ್ದು ನನ್ನ ಹೆಸರಲ್ಲಿ ಬಾರ್ ನಡೆಸುತ್ತಿರುವುದಾಗಿ ಬಾರ್ ಮಾಲೀಕ ಹೇಳಿದ್ದಾರೆ.

0

Leave a Reply

Your email address will not be published. Required fields are marked *