ಮೊದಲ ಬಾರಿಗೆ ನಾಯಕರಾಗಿ ಗಣೇಶ್ ರಾವ್ ಕೇಸರ್ಕರ್

ಗಣೇಶ್ ರಾವ್ ಕೇಸರ್ಕರ್ ತಂದೆ ನಿವೃತ್ತ ಮಿಲಿಟರಿ ಅಧಿಕಾರಿ ಕೃಷ್ಣರಾವ್. ಹಾಗಾಗಿ ಗಣೇಶ್ ರಾವ್ ಕೂಡ ಮಿಲಿಟರಿ ಅಧಿಕಾರಿಗಳಂತೆ ಆರಡಿ ಮೀರಿದ ಎತ್ತರ, ಕಟ್ಟುಮಸ್ತು ದೇಹದಿಂದ ಮನ ಸೆಳೆದವರು. ರಂಗಭೂಮಿ ಕಲಾವಿದರಾಗಿ, ಜಾಹೀರಾತು ಮತ್ತು ಕಿರುತೆರೆಗಳಲ್ಲಿ ನಟಿಸಿ ಸಿನಿಮಾರಂಗಕ್ಕೆ ಬಂದವರು. ಇದುವರೆಗೆ 179 ಕನ್ನಡ ಚಿತ್ರಗಳಲ್ಲಿ ಕನ್ನಡದ ಸ್ಟಾರ್ ನಟರ ಮುಂದೆ, ಖಳನಟರಾಗಿ ಗುರುತಿಸಿಕೊಂಡವರು. ಆದರೆ ಇದೇ ಮೊದಲ ಬಾರಿಗೆ ನಾಯಕರಾಗಿ ನಟಿಸಿದಂಥ ಚಿತ್ರ ನಮ್ಮವರು ಯಾರು..?

ಪುರುಷೋತ್ತಮ ಓಂಕಾರ್ ನಿರ್ದೇಶನದಲ್ಲಿ ಸಾಂಸಾರಿಕ ಕಥೆಯನ್ನು ಹೇಳಿದಂಥ ಚಿತ್ರ ನಮ್ಮವರು ಯಾರು. ಚಿತ್ರದಲ್ಲಿ ಗಣೇಶ್ ರಾವ್, ಪತ್ನಿ ಮತ್ತು ವಯಸ್ಸಾದ ತಾಯಿ ಮಧ್ಯೆ ಸಿಕ್ಕಿಕೊಂಡು ಒದ್ದಾಡುವ ಮಗನ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ನೀಡಿರುವ ಮನೋಜ್ಞ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಇಂದು ಬಿಡುಗಡೆಯಾದ ದೊಡ್ಡ ಚಿತ್ರಗಳ ನಡುವೆ ಗಾಂಧಿನಗರದಿಂದ ನಮ್ಮವರು ಯಾರು ಚಿತ್ರ ಅನಿವಾರ್ಯವಾಗಿ ಜಾಗ ಖಾಲಿ ಮಾಡಿದೆ. ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಎರಡನೇ ವಾರಕ್ಕೆ ಕಾಲಿಟ್ಟಿರುವ ಖುಷಿ ಅವರದಾಗಿದೆ. ಒಟ್ಟಿನಲ್ಲಿ ಚಿತ್ರ ಗಣೇಶ್ ರಾವ್ ಕೇಸರ್ಕರ್ ಅವರನ್ನು ಗುರುತಿಸುವಂತೆ ಮಾಡಿದೆ. ಪ್ರತಿಭೆಗೆ ತಕ್ಕಂಥ ಪಾತ್ರಗಳು ಇನ್ನಾದರೂ ಸಿಗುತ್ತವಾ ಎಂದು ಕಾದು ನೋಡಬೇಕಿದೆ.

ಶಶಿಕರ ಪಾತೂರು, ಫಿಲ್ಮ್ ಬ್ಯೂರೋ ಸುದ್ದಿ ಟಿವಿ

0

Leave a Reply

Your email address will not be published. Required fields are marked *