ಚೆರ್ರಿ ಹಣ್ಣುಗಳ ಕೊಯ್ಲಿನಲ್ಲಿ ನಿರತರಾಗಿರುವ ಕಾಶ್ಮೀರಿ ರೈತರು

ಶ್ರೀನಗರ: ತಾಜಾ ಚೆರ್ರಿ ಹಣ್ಣುಗಳ ಇಳುವರಿ ಕಾಶ್ಮೀರದಲ್ಲಿ ಆರಂಭವಾಗಿದೆ. ಈ ಮೂಲಕ ಸದಾ ಪ್ರಕ್ಷುಬ್ಧ ಪರಿಸ್ಥಿತಿಯ ವರದಿಗೆ ಸಾಕ್ಷಿಯಾಗಿರುವ ಕಾಶ್ಮೀರದ ಕುರಿತು ಸಕಾರಾತ್ಮಕ ಸುದ್ದಿ ಕೂಡ ಕೇಳಿಬರುತ್ತಿದೆ. ಹೌದು, ಸದಾ ಗುಂಡಿನ ಮೊರೆತ, ಭಯೋತ್ಪಾದಕ ದಾಳಿಗಳ ಕುರಿತ ಸುದ್ದಿಗಳಿಗೆ ಕಾಶ್ಮೀರ ಸೀಮಿತ ಅನ್ನೋ ನಬಿಕೆ ಎಲ್ಲರಲ್ಲಿದೆ. ಆದರೆ, ಅಲ್ಲೀಗ ಸ್ವಾದಿಷ್ಟ, ರುಚಿಕರ ಮತ್ತು ಆರೋಗ್ಯಕ್ಕೆ ಪೂರಕವಾದ ಚೆರ್ರಿ ಹಣ್ಣುಗಳ ಕಟಾವು ಭರದಿಂದ ಸಾಗುತ್ತಿದೆ. ರಾಜ್ಯದ ರೈತರು ಚೆರ್ರಿ ಹಣ್ಣುಗಳ ಕೊಯ್ಲಿನಲ್ಲಿ ನಿರತರಾಗಿದ್ದಾರೆ.

ಈ ವರ್ಷದ ಆರಂಭದಲ್ಲಿ ವ್ಯತಿರಿಕ್ತ ಹವಾಮಾನ ಪರಿಸ್ಥಿತಿ ಉಂಟಾಗಿತ್ತು. ಆದರೆ, ನಂತರ ನಡೆದ ಅದೇ ಹವಾಮಾನ ಬದಲಾವಣೆಗಳಿಂದಾಗಿ ಈ ಬಾರಿ ಚೆರ್ರಿ ಇಳುವರಿಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬರಲಿಲ್ಲ. ಹವಾಮಾನ ಇಲಾಖೆಯ ಲೆಕ್ಕಾಚಾರಗಳನ್ನೂ ಮೀರಿ ಈ ಬಾರಿ ಹೆಚ್ಚಿನ ಇಳುವರಿ ರೈತರ ಕೈವಶವಾಗಿದೆ.

ಕಾಶ್ಮೀರಿ ಆಪಲ್ ಜಗತ್ಪ್ರಸಿದ್ಧ. ಆದರೆ, ಅಷ್ಟೇ ಅಲ್ಲ ಕಾಶ್ಮೀರದಲ್ಲಿ ಸ್ಟ್ರಾಬೆರಿಯ ನಂತರ ಅತಿಹೆಚ್ಚಿನ ಪ್ರಮಾಣದಲ್ಲಿ ಚೆರ್ರಿ ಹಣ್ಣುಗಳನ್ನು ಕಾಶ್ಮೀರಿ ರೈತರು ಬೆಳೆಯುತ್ತಾರೆ. ಈ ವರ್ಷ ಚೆರ್ರಿ ಹಣ್ಣಗಳ ಇಳುವರಿ ಮತ್ತು ಗುಣಮಟ್ಟ ಕೂಡ ಉತೃಷ್ಟವಾಗಿದೆ. ಸಾಮಾನ್ಯವಾಗಿ ಮೇ – ಜೂನ್​ವರೆಗೆ ಚೆರ್ರಿ ಹಣ್ಣುಗಳ ಕೊಯ್ಲು ನಡೆಯುತ್ತದೆ.

ಅಂದಹಾಗೆ ಶೇ. 25ರಷ್ಟು ಕಾಶ್ಮೀರಿಗರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಚೆರ್ರಿ ಹಣ್ಣಿಗೆ ಸಂಬಂಧಿಸಿದ ಉದ್ಯಮದಲ್ಲಿ ನಿರತರಾಗಿದ್ದಾರೆ. ಗೋಲ್ಡ್ ಚೆರ್ರಿ, ಮಖ್ಮಲಿ ಮತ್ತು ಮಿಶ್ರಿ ಮೊದಲಾದ ಹೆಸರಿನಲ್ಲಿ ಚೆರ್ರಿ ಹಣ್ಣುಗಳನ್ನು ಇಲ್ಲಿ ವಿಂಗಡಿಸಲಾಗುತ್ತೆ. ಮಿಶ್ರಿ ಹಣ್ಣುಗಳಿಗೆ ದೇಶದಾದ್ಯಂತ ಭಾರೀ ಬೇಡಿಕೆ ಇದೆ.

ಸಾಮಾನ್ಯವಾಗಿ ಚೆರ್ರಿ ಹಣ್ಣುಗಳನ್ನು ಪರ್ವತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಕಾಶ್ಮೀರದ ಹರ್ವಾನ್, ದರ, ಕಂಗನ್, ನಿಷತ್, ತಂಗಮಾರ್ಗ್ ಮತ್ತು ಶೊಪೇನ್​​ನಲ್ಲಿ ಈ ಚೆರ್ರಿ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಕಾಶ್ಮೀರದ ಈ ಪ್ರಾಂತ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಚೆರ್ರಿಯನ್ನು ರೈತರು ಅವಲಂಬಿಸಿಕೊಂಡಿದ್ದಾರೆ. ರಾಜೌರಿ, ಪೂಂಛ್ ಜಿಲ್ಲೆಯ ಕಾರ್ಮಿಕರು ಚೆರ್ರಿ ಹಣ್ಣಿನ ಇಳುವರಿಯನ್ನು ಆಧರಿಸಿಯೇ ಜೀವನ ನಡೆಸುತ್ತಾರೆ. ಹೀಗೆ ದೇಶದ ಜನರಿಗೆ ಒಂದು ಕಡೆ ಬಾಯ ರುಚಿಯನ್ನು ತಣಿಸುವ, ಇನ್ನೊಂದು ದಿಕ್ಕಿನಲ್ಲಿ ಆರೋಗ್ಯ, ಉದ್ಯೋಗ ಮತ್ತು ಜೀವನವನ್ನು ಕಲ್ಪಿಸಿರುವುದೇ ಈ ಚೆರ್ರಿ ಹಣ್ಣುಗಳ ವಿಶೇಷ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *