ಶಾಂತಿ ಸಮಾನತೆ ಕಾಪಾಡಲು ಶಿರಸಿಯಲ್ಲಿಂದು ‘ಸೌಹಾರ್ದ ನಡಿಗೆ’

ಶಿರಸಿ: ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿಂದು ಸಮಾಜ ಚಿಂತಕರು, ವಿಚಾರವಾದಿಗಳು, ಸಾಹಿತಿಗಳು ಹಾಗೂ ಪತ್ರಕರ್ತರು ಸೌಹಾರ್ದ ನಡಿಗೆ ನಡೆಸಿದರು. ಅಹಮಾದಾಬಾದ್‌ನ ಮಾನವ ಹಕ್ಕು ಹೋರಾಟಗಾರ ಮಾರ್ಟನ್ ಮಾಕ್ವಾನ್ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಸೌಹಾರ್ದ ನಡಿಗೆಗೆ ಚಾಲನೆ ನೀಡಿದರು. ನಂತರ ಪ್ರೀತಿ ಪದಗಳ ಪಯಣದ ಪಯಣ ಹೆಸರಿನ ಮೂಲಕ ಯಾವುದೇ ಘೋಷಣೆ ಕೂಗದೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು. ನಮ್ಮ ಸಂವಿಧಾನ, ನಮ್ಮ ಹೆಮ್ಮೆ ಹೆಸರಿನಡಿ ರಾಜ್ಯ ಮಟ್ಟದ ಬೃಹತ್ ಸಮಾವೇಶದವರೆಗೂ ಶಾಂತಿಯುತ ಸೌಹಾರ್ದ ನಡಿಗೆ ಮಾಡಲಾಯ್ತು. ಈ ವೇಳೆ ಮಾತನಾಡಿದ ಮಾನವ ಹಕ್ಕು ಹೋರಾಟಗಾರ ಮಾರ್ಟಿನ್ ಮಾಕ್ವಾನ್ ಹಾಗೂ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ವಿಮಲಾ, ಸೌಹಾರ್ದ ನಡಿಗೆಯ ಮೂಲ ಉದ್ದೇಶ ತಿಳಿಸಿದರು. ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಹಿಂದೆಂದೂ ಕಾಣದ ಹಿಂಸಾಚಾರ ನಡೆದಿದೆ. ಶಾಂತಿ, ಸೌಹಾರ್ದಕ್ಕೆ ಹೆಸರಾದ ಈ ಜಿಲ್ಲೆಯಲ್ಲಿ ಅಶಾಂತಿ ಸೃಷ್ಠಿಸುವ ಕೆಲಸವಾಗುತ್ತಿದೆ. ಸಂವಿಧಾನಕ್ಕೆ ಅಗೌರವ ತರುವ ಕೆಲಸವಾಗ್ತಿದೆ. ಸುಪ್ರಿಂಕೋರ್ಟ್‌‌ನ ನ್ಯಾಯಾಧೀಶರೇ ಜನರ ಬಳಿ ಬಂದು ಶಾಂತಿ ಕಾಪಾಡುವಂತೆ ಮನವಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಶಾಂತಿ ಸಮಾನತೆ ಕಾಪಾಡಲು ಈ ಮನವಿ ಎಂದು ಹೇಳಿದರು.

0

Leave a Reply

Your email address will not be published. Required fields are marked *