ಫಿಫಾ ಪಂದ್ಯ ವೀಕ್ಷಣೆಗೆ ವಿದ್ಯಾರ್ಥಿಗಳಿಗೆ ಉಚಿತ ಪಾಸ್

ಮುಂದಿನ ತಿಂಗಳು ಕೋಲ್ಕತ್ತಾದಲ್ಲಿ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್ ಫುಟ್ಬಾಲ್ ಕೂಟದ ಪಂದ್ಯಗಳನ್ನು ವೀಕ್ಷಿಸಲು ಶಾಲಾ ಮತ್ತು ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡೊಕೆ ಪಶ್ಚಿಮ ಬಂಗಾಲ ಸರಕಾರ ಮುಂದಾಗಿದೆ.ಅಕ್ಟೋಬರ್ 8ರಿಂದ ನಡೆಯಲಿರುವ ಈ ಕೂಟದ ಪಂದ್ಯಗಳನ್ನು ವೀಕ್ಷಿಸಲು ಶಾಲಾ ಮತ್ತು ಕಾಲೇಜ್ ವಿದ್ಯಾರ್ಥಿ-ವಿದ್ಯಾರ್ಥಿನಿಯವರಿಗೆ ಸುಮಾರು 5 ಸಾವಿರ ಉಚಿತ ಟಿಕೆಟ್ ನೀಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಫೈನಲ್ ಸಹಿತ 10 ಪಂದ್ಯಗಳು ನಡೆಯಲಿದ್ದು ಎಲ್ಲ ಪಂದ್ಯಗಳಿಗೂ ಉಚಿತ ಟಿಕೆಟ್ ನೀಡಲಾಗುತ್ತದೆ ಎಂದು ಪಶ್ಚಿಮ ಬಂಗಾಲ ಶಿಕ್ಷಣ ಇಲಾಖೆ ತಿಳಿಸಿದೆ.

0

Leave a Reply

Your email address will not be published. Required fields are marked *