ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಾಸ್ಸಾದ ಸಿದ್ದರಾಮಯ್ಯ

ಮಾಜಿ ಸಿಎಂ ವಿದೇಶ ಪ್ರವಾಸ ಮುಗಿಸಿರುವ ಹಿನ್ನೆಲೆ, ಇಂದು ಮಧ್ಯಾಹ್ನದವರೆಗೂ ಯಾರನ್ನೂ ಭೇಟಿ ಮಾಡದಿರಲು ನಿರ್ಧಾರ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ನಿರ್ಧಾರ, ಆಪ್ತರಿಗೆ ಆಪ್ತರು ಮಾತ್ರ ಭೇಟಿ ಮಾಡಲು ಅವಕಾಶ. ಮಧ್ಯಾಹ್ನದ ಬಳಿಕ ಕಾಂಗ್ರೆಸ್ ಸಚಿವರಿಂದ ಸಿದ್ದರಾಮಯ್ಯ ಭೇಟಿ, ಅಸಮಾಧಾನ ತೋಡಿಕೊಳ್ಳಲು ಸಜ್ಜಾಗಿರುವ ಸಚಿವರು. ವರ್ಗಾವಣೆ ವಿಚಾರದಲ್ಲಿ ಏಕಪಕ್ಷೀಯವಾಗಿ ಸಿಎಂ ನಿರ್ಧಾರ ತೆಗೆದುಕೊಂಡಿದ್ದಾರೆ, ಅಸಮಾಧಾನ ಈ ಹಿಂದೆಯೂ ಸಮನ್ವಯ ಸಮಿತಿ ಮುಂದೆ ಅಸಮಾಧಾನ.

ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಾಸ್ಸಾದ ಸಿದ್ದರಾಮಯ್ಯ, ಅಲ್ಲಿನ ಸಮಯ ಹಾಗೂ ಆಹಾರ ಶೈಲಿಗೆ ಹೊಂದಿಕೊಂಡಿದ್ದ ಮಾಜಿ ಸಿಎಂ. ಮತ್ತೆ ಸ್ವದೇಶಿ ಫುಡ್ ಸ್ಟೈಲ್ ಗೆ ಹೊಂದಿಕೊಳ್ಳಲು ಮತ್ತೆರಡು ದಿನಗಳ ಅವಕಾಶ ಬೇಕು, ಸಿದ್ದರಾಮಯ್ಯ ರೋಟೀನ್ ವೈದ್ಯರಿಂದ ಸಲಹೆ, ಇಲ್ಲಿನ ನಿದ್ರೆ ಸಮಯ ಹಾಗೂ ಆಹಾರ ಪದ್ದತಿಗೆ ನಿಧಾನವಾಗಿ ಹೊಂದಿಕೊಳ್ಳುವಂತೆ ಸಲಹೆ.

ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ವಿದೇಶ ಪ್ರವಾಸ ಚೆನ್ನಾಗಿತ್ತು. ಪ್ರಸ್ತುತ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಇಲ್ಲ. ಜಾರಕಿಹೊಳಿ ಬ್ರದರ್ಸ್ ಸಮಸ್ಯೆ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ರು. ಅಲ್ಲದೇ ಯಡಿಯೂರಪ್ಪ ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಯಡಿಯೂರಪ್ಪ ಸುಳ್ಳು ಹೇಳ್ತಾರೆ. ಅಗತ್ಯ ವಿದ್ರೆ ಸಮನ್ವಯ ಸಮಿತಿ ಸಭೆ ಕರೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

0

Leave a Reply

Your email address will not be published. Required fields are marked *