ಪಂಚಭೂತಗಳಲ್ಲಿ ಲೀನವಾದ ಮಾಜಿ ಪ್ರಧಾನಿ ವಾಜಪೇಯಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ದೆಹಲಿಯ ಯುಮುನಾನದಿ ತೀರದಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ವಾಜಪೇಯಿ ಅಂತ್ಯಸಂಸ್ಕಾರ ಮಾಡಲಾಗಿದೆ. ಇಂದು ಸಂಜೆ 5 ಗಂಟೆ ವೇಳೆ ದೇಶ-ವಿದೇಶಗಳ ಗಣ್ಯಾತಿಗಣ್ಯರು, ಹಾಗೂ ಸಹಸ್ರಾರು ಜನರ ಸಮ್ಮುಖದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರ ಅಂತ್ಯಸಂಸ್ಕಾರವನ್ನು ಸಕಲಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಬ್ರಾಹ್ಮಣ ಸಂಪ್ರದಾಯದ ವಿಧಿವಿಧಾನದಂತೆ ಅಂತ್ಯಸಂಸ್ಕಾರ ಪೂರ್ಣಗೊಂಡಿತು. ಪುರೋಹಿತರ ವೇದಮಂತ್ರಘೋಷಗಳೊಂದಿಗೆ ಶ್ರೀಗಂಧದ ಕಟ್ಟಿಗೆಗಳ ಮೇಲೆ ಚಿರನಿದ್ರೆಗೆ ಜಾರಿದ್ದ ವಾಜಪೇಯಿ ಅವರ ಚಿತೆಗೆ ಅವರ ದತ್ತು ಪುತ್ರಿ ಅಗ್ನಿಸ್ಪರ್ಶ ಮಾಡಿದರು.

0

Leave a Reply

Your email address will not be published. Required fields are marked *