ಪೌರಕಾರ್ಮಿಕರಿಗೆ ವರದಾನವಾದ ಇಂದಿರಾ ಕ್ಯಾಂಟೀನ್​​

ದೇಶದಲ್ಲೇ ಪ್ರಥಮಬಾರಿಗೆ ಪೌರಕಾರ್ಮಿಕರಿಗೆ ಉಚಿತವಾಗಿ ಬಿಸಿಯೂಟ ನೀಡ್ತಿರೋ ನಗರ ಬೆಂಗಳೂರು. ಬಿಬಿಎಂಪಿಯ ಈ ಕೀರ್ತಿಗೆ ಒಂದು ವರ್ಷ ಪೂರೈಸಿದೆ. ರಾಜ್ಯ ಸರ್ಕಾರ ಬೆಂಗಳೂರಿನ ಶ್ರಮಿಕ ವರ್ಗಕ್ಕಾಗಿ, ಹಸಿದು ಮಲಗಬಾರದೆಂದು ಜಾರಿಗೆ ತಂದ, ಇಡೀ ದೇಶದಲ್ಲೇ ಸುದ್ದಿಮಾಡಿದ ಯೋಜನೆ ಇಂದಿರಾ ಕ್ಯಾಂಟೀನ್. ಇದಕ್ಕು ಮೊದಲೇ ನಗರದಲ್ಲಿ ಕೆಲಸ ಮಾಡ್ತಿರೋ 30 ಸಾವಿರ ಗುತ್ತಿಗೆ ಹಾಗೂ ಖಾಯಂ ಪೌರಕಾರ್ಮಿಕರಿಗೆ ಬಿಬಿಎಂಪಿ ಬಿಸಿಯೂಟ ನೀಡಲು ಆರಂಭಿಸಿತ್ತು. ಈ ಯೋಜನೆಗೆ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಿ ಇಂದಿಗೆ 1 ವರ್ಷ ಸಂದಿದೆ.

ಬಿಬಿಎಂಪಿಯ ಮಾಜಿ ಮೇಯರ್ ಪದ್ಮಾವತಿ ಆಡಳಿತಾವಧಿಯಲ್ಲಿ ಇಸ್ಕಾನ್ ಸಹಯೋಗದೊಂದಿಗೆ ಈ ಯೋಜನೆ ಜಾರಿಗೆ ತರಲಾಯ್ತು. ಬೆಳ್ಳಂಬೆಳಗ್ಗೆ ನಗರದ ಸ್ವಚ್ಛತೆ ಮಾಡುವ ಪೌರಕಾರ್ಮಿಕರು ಹಸಿದು ಕೆಲಸ ಮಾಡ್ಬಾರ್ದು ಅನ್ನೋ ಕಾರಣಕ್ಕೆ 10 -30 ರ ವೇಳೆಗೆ ಊಟ ನೀಡಲು ಆರಂಭಿಸಲಾಯ್ತು. ಇಂದಿನವರೆಗೂ ಈ ಯೋಜನೆ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದು, ಬಿಬಿಎಂಪಿ ವರ್ಷಕ್ಕೆ 20 ಕೋಟಿ ವೆಚ್ಚ ಮಾಡಿದೆ. ಒಂದು ಊಟಕ್ಕೆ 20 ರುಪಾಯಿಯಂತೆ ಪ್ರತಿನಿತ್ಯ ಅನ್ನ ಸಾಂಬಾರ್ ಅಥವಾ ವಿವಿಧ ರೈಸ್ ಬಾತ್ ಗಳನ್ನು ಇಸ್ಕಾನ್ ಪೂರೈಸುತ್ತಿದೆ. ನಗರದ 198 ವಾರ್ಡ್​ಗಳಲ್ಲೂ ಪೌರಕಾರ್ಮಿಕರು ಹಾಜರಾತಿ ಪಡೆಯುವ 600 ಮಸ್ಟರಿಂಗ್​ ಪಾಯಿಂಟ್​ಗಳಿಗೆ ಊಟ ಪೂರೈಸಲಾಗುತ್ತೆ. ಇದರಿಂದ ಪೌರಕಾರ್ಮಿಕರು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ನೆರವಾಗುತ್ತೆ.

ಒಟ್ಟಿನಲ್ಲಿ ದೇಶದ ಯಾವುದೇ ಮಹಾನಗರ ಪಾಲಿಕೆ ಮಾಡದ ಕೆಲಸವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೌರಕಾರ್ಮಿಕರ ಹಿತವನ್ನು ಕಾಪಾಡ್ತಿದೆ. ಈ ಮೂಲಕ ಹಳೆಯ ಸರ್ಕಾರಗಳು ನೀಡಿದ್ದ ಗಾರ್ಬೇಜ್ ಸಿಟಿ ಖ್ಯಾತಿಯನ್ನು ದೂರಮಾಡಿ, ನಗರದ ಕೀರ್ತಿಯನ್ನು ಎತ್ತಿಹಿಡಿಯಲು ಮುಂದಾಗಿದೆ.

ಸೌಮ್ಯಶ್ರೀ ಮಾರ್ನಾಡ್, ಮೆಟ್ರೋ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *