ರೈತರ ಚಾಲ್ತಿ ಬೆಳೆ ಸಾಲ ಮನ್ನಾ

ಚಾಲ್ತಿ ಬೆಳೆ ಸಾಲ ಮನ್ನಾ ಘೋಷಣೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ. ಸಹಕಾರ ವಲಯದ ಬ್ಯಾಂಕುಗಳ ರೈತರ ಚಾಲ್ತಿ ಸಾಲ ಮನ್ನಾ.  1 ಲಕ್ಷ ರೂಪಾಯಿವರೆಗಿನ ಚಾಲ್ತಿ ಸಾಲ ಮನ್ನಾ. ಸಹಕಾರಿ ಬ್ಯಾಂಕುಗಳಲ್ಲಿ ರೈತರ ಚಾಲ್ತಿ ಸಾಲದ ಪ್ರಮಾಣ 10,734 ಕೋಟಿ ರೂ.

ನಾಲ್ಕು ಹಂತಗಳಲ್ಲಿ ನಾಲ್ಕು ವರ್ಷ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ. ಬಜೆಟ್ ಮೇಲಿನ ಚರ್ಚೆಗೆ ಅಧಿವೇಶನದಲ್ಲಿಂದು ಉತ್ತರ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ದೊಡ್ಡಮಟ್ಟದಲ್ಲಿ ನನ್ನ ಬಜೆಟ್ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.ಅಪ್ಪ ಮಕ್ಕಳ ಬಜೆಟ್,ಅಣ್ಣತಮ್ಮಂದಿರ ಬಜೆಟ್,ಒಂದೆರಡು ಜಿಲ್ಲೆಗಳಿಗೆ ಸೀಮಿತವಾದ ಬಜೆಟ್,ಸಮಗ್ರ ರಾಜ್ಯದ ದೃಷ್ಟಿಕೋನವಿಲ್ಲದ ಬಜೆಟ್ ಎಂಬೆಲ್ಲಾ ಟೀಕೆಗಳು ವ್ಯಕ್ತವಾಗಿವೆ ಅಂದ್ರು. ಚುನಾವಣೆಗೆ ಮುನ್ನ ನಮ್ಮ‌ ಪ್ರಣಾಳಿಕೆಯಲ್ಲಿ ಸಾಲ ಮನ್ನಾ, ವೃದ್ದಾಪ್ಯ ವೇತನ, ಹೆಣ್ಣುಮಕ್ಕಳಿಗೆ ನೆರವು ಮೊದಲಾದ ವಿಷಯಗಳು ವ್ಯಕ್ತವಾಗಿವೆ. ಅದನ್ನೇ ಪ್ರಮುಖವಾಗಿ ಉಲ್ಲೇಖಿಸಿ ಮೋಸ ಮೋಸ ಎಂದಿದ್ದಾರೆ. ಪ್ರತಿಪಕ್ಷ ನಾಯಕರಂತೂ ಜನರಿಗೆ ದ್ರೋಹ ಮಾಡಿದ್ದೀರಿ ಎಂದು ಆರೋಪಿಸಿದ್ದಾರೆ.ನಾನು ಜಾರಿಗೊಳಿಸಲು ಸಾಧ್ಯವೇ ಇಲ್ಲದ ಯೋಜನೆಗಳನ್ನು ಕೊಡಲು ಹೋಗಿಲ್ಲ. ಇನ್ನು ಸಾಲ ಮನ್ನಾದಿಂದ ಒಕ್ಕಲಿಗಸಮುದಾಯಕ್ಕೆ ಶೇ.32ರಷ್ಟು ಅನುಕೂಲವಾಗಿದೆ ಎಂಬ ವರದಿಗಳು ಬಂದಿವೆ. ಆದರೆ ನಾನು ಜಾತಿ ಆಧಾರಿತವಾಗಿ ಸಾಲಮನ್ನಾ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಬಜೆಟ್ ನಲ್ಲಿ ಉತ್ತರಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ ಬಜೆಟ್ ನಲ್ಲಿ ಆ ರೀತಿ ತಾರತಮ್ಯ ಮಾಡಲಿಲ್ಲ ಎಂದು ವಿವರಣೆ, ಯಾವ ಯಾವ ಜಿಲ್ಲೆಗಳ ರೈತರಿಗೆ ಎಷ್ಟೆಷ್ಟು ಸಾಲಮನ್ನಾದ ಲಾಭ ಪಡೆಯಲಿದ್ದಾರೆ ಎಂದು ಅಂಕಿಅಂಶಗಳನ್ನು ನೀಡಿದರು.ನಾನು 34 ಸಾವಿರ ಕೋಟಿ ಸಾಲ ಮನ್ನಾ ಘೋಷಣೆ ಮಾಡಿ ಮಾತಿಗೆ ತಪ್ಪಿದ್ರೆ ಜನ ಸುಮ್ಮನೆ ಬಿಡ್ತಾರಾ ಅಂತ ಪ್ರಶ್ನಿಸಿದ ಸಿಎಂ, ಸಾಲ ಮನ್ನಾ ವಿಷಯದಲ್ಲಿ ಸಹಕಾರ ನೀಡಿದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪ್ರಮುಖರನ್ನು ಅಭಿನಂದಿಸುತ್ತೇನೆ. ಅವರೊಂದಿಗೆ ಚರ್ಚಿಸಿದ ನಂತರವೇ ಈ ಸಾಹಸಕ್ಕೆ ಇಳಿದಿದ್ದೇನೆ. ಅವರ ಸಹಕಾರದೊಂದಿಗೇ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗುತ್ತದೆ ಎಂದ್ರು…

 

 

 

 

 

 

 

 

 

0

Leave a Reply

Your email address will not be published. Required fields are marked *