ಮಹಾರಾಷ್ಟ್ರ ಬಂದ್: ಜನಜೀವನ ಅಸ್ತವ್ಯಸ್ಥ

ಮುಂಬೈ: ಮಹಾರಾಷ್ಟ್ರ ರೈತರು ಕರೆ ನೀಡಿರುವ ಮಹಾರಾಷ್ಟ್ರ ಬಂದ್​​ನಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ತಕ್ಷಣ ಈ ಸಮಸ್ಯೆಗೆ ಪರಿಹಾರ ನೀಡುವಂತೆ ಸರ್ಕಾರವನ್ನು ನಾಗರಿಕರು ಆಗ್ರಹಿಸಿದ್ದಾರೆ. ತರಕಾರಿ, ಸೊಪ್ಪು, ಹಣ್ಣುಗಳ ಕೊರತೆ ಎದುರಾಗಿದ್ದು, ಬೆಲೆ ದುಪ್ಪಟ್ಟಾಗಿದೆ. ಸಾಮಾನ್ಯವಾಗಿ ಪ್ರತಿ ಕೆಜಿಗೆ 40 – 50 ರೂ. ಇದ್ದ ಬೆಲೆ ಈಗ 80 – 100 ರೂ.ಗಳಿಗೆ ಏರಿದೆ. ಇದರಿಂದಾಗಿ ತಮ್ಮ ಮಾಸಿಕ ವೇತನವನ್ನು ಆಧಿರಿಸಿ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ದೈನಂದಿನ ಖರ್ಚಿನಲ್ಲಿ ಕೂಡ ಏರಿಕೆಯಾಗಿದೆ.

ಇನ್ನು ಮಾರಾಟಗಾರರು ಕೂಡ ಪೂರೈಕೆಯ ಕೊರತೆಯನ್ನು ಎದುರಿಸುತ್ತಿದ್ದಾರೆ. ಅಗತ್ಯ ಪ್ರಮಾಣದ ತರಕಾರಿ, ಹಣ್ಣುಗಳು ರೈತರ ಮುಷ್ಕರದಿಂದಾಗಿ ಸರಬರಾಜಾಗುತ್ತಿಲ್ಲ. ಇದರಿಂದಾಗಿ ಮಾರಾಟದ ಪ್ರಮಾಣದಲ್ಲಿ ಕೂಡ ಇಳಿಕೆಯಾಗಿದೆ. ದಾದ್ರಿಯ ಮಾರುಕಟ್ಟೆಯ ವ್ಯಾಪಾರಿಗಳು ತಕ್ಷಣ ಸರ್ಕಾರ ರೈತರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಸಿದ್ದಾರೆ.

ರೈತರ ಮುಷ್ಕರದಿಂದಾಗಿ ಅಗತ್ಯ ಪ್ರಮಾಣದ ತರಕಾರಿಗಳು ಸರಬರಾಜಾಗುತ್ತಿಲ್ಲ. ಇನ್ನು ಹೆಚ್ಚಿದ ದರದಿಂದಾಗಿ ಜನರು ತರಕಾರಿಗಳನ್ನು ಕೊಳ್ಳುತ್ತಿಲ್ಲ ಎಂದು ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ತಮ್ಮ ಬಳಿ ಅಗತ್ಯ ಪ್ರಮಾಣದ ದಾಸ್ತಾನು ಇಲ್ಲ. ಗ್ರಾಹಕರನ್ನೂ ಕೂಡ ನಾವು ಕಳೆದುಕೊಳ್ಳುತ್ತಿದ್ದೇವೆ ಇದರಿಂದಾಗಿ ತಮ್ಮ ದೈನಂದಿನ ದುಡಿಮೆಗೆ ಕೂಡ ತೊಂದರೆಯಾಗಿದೆ. ಸರ್ಕಾರ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅವರ ಆಗ್ರಹಿಸಿದ್ದಾರೆ.

ಕಿಸಾನ್ ಕ್ರಾಂತಿ ಮೋರ್ಚಾ ಮತ್ತು ಇತರ ರೈತ ಸಂಘಟನೆಗಳು ಜೂನ್ 1ರಿಂದ ಮಹಾರಾಷ್ಟ್ರದಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದವು. ರಸ್ತೆಗೆ ಹಾಲು ಸುರಿಯವ ಮೂಲಕ ರೈತರು ಪ್ರತಿಭಟನೆ ಆರಂಭಿಸಿದ್ದರು. ಆದರೆ, ಕಳೆದ ಶುಕ್ರವಾರ ಕಿಸಾನ್ ಮುಕ್ತಿ ಮೋರ್ಚಾ ಸಂಘಟನೆಯೊಂದಿಗೆ ಸಂಧಾನ ನಡೆಸಿದ್ದ ಸಿಎಂ ಫಡ್ನವೀಸ್ ಅಕ್ಟೋಬರ್ 31ರ ಒಳಗೆ ಭರವಸೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ನಂತರ ಕಿಸಾನ್ ಮುಕ್ತಿ ಮೋರ್ಚಾ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿತ್ತು. ಆದರೆ, ಈ ನಿರ್ಧಾರ ರೈತ ಸಂಘಟನೆಗಳಲ್ಲಿ ಒಡಕು ಮೂಡಿಸಿತ್ತು. ಇನ್ನಿತರ ಸಂಘಟನೆಗಳು ಪ್ರತಿಭಟನೆಯನ್ನು ಮುಂದುವರಿಸಿದ್ದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *