ತಡರಾತ್ರಿ ಕೂಡ ನಡೆಯುತ್ತೆ ಪಾರ್ಟಿ, ಮೋಜು, ಮಸ್ತಿ

ಮೈಸೂರು: ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳ ಜೊತೆಗೆ ದೈವಿ ಭಕ್ತಿಯ ತಾಣವೂ ಆಗಿರುವ ಚಾಮುಂಡಿಬೆಟ್ಟ ಈಗ ಅನೈತಿಕ ಚಟುವಟಿಕೆಯ ತಾಣವಾಗ್ತಿದೆ. ಕಿರಿಕಿರಿ ಉಂಟುಮಾಡುವ ಪ್ರೇಮಿಗಳ ಉಪಟಳದಿಂದ ಬೇಸತ್ತಿರುವ ಭಕ್ತರನ್ನ ಆ ತಾಯಿ ಚಾಮುಂಡಿಯೇ ಕಾಪಾಡಬೇಕಾದ ದುಸ್ಥಿತಿ ಎದುರಾಗಿದೆ. ಕಳೆದ ವರ್ಷ ಮಳೆಯಿಂದ ಕುಸಿದು ಬಿದ್ದಿದ್ದ ನೆನಪಿರಲಿ ಚಿತ್ರದಲ್ಲಿ ಅದ್ಭುತವಾಗಿ ಚಿತ್ರಿಸಿರುವ ನೆನಪಿರಲಿ ಗೋಪುರ ಮತ್ತೆ ಕುಸಿಯುವ ಆತಂಕ ಎದುರಾಗ್ತಿದೆ. ಸದ್ಯ ನೆನಪಿರಲಿ ಕಟ್ಟಡ ಅನೈತಿಕ ಚಟುವಟಿಕೆಯ ಅಡ್ಡವಾಗಿ ಮಾರ್ಪಾಡಾಗ್ತಿದೆ. ಪಾರ್ಟಿ, ಮೋಜು, ಮಸ್ತಿ ಹೆಸರಲ್ಲಿ ಅನೈತಿಕ ಚಟುವಟಿಕೆಯ ಅಡ್ಡವಾಗಿ ಮಾರ್ಪಾಡಾಗಿದೆ. ತಡರಾತ್ರಿ ಕೂಡ ಇಲ್ಲಿ ಬರ್ತ್ ಡೇ ಸೇರಿದಂತೆ ಪಾರ್ಟಿಗಳು ನಡೆಯುತ್ತವೆ. ಅದರಲ್ಲೂ ವೀಕೆಂಡ್​​​ಗಳಲ್ಲಿ ಇಲ್ಲಿ ಮೋಜು ಮಸ್ತಿಗೆ ಕಡಿವಾಣ ಹಾಕಲು ಅಸಾಧ್ಯವಾಗ್ತಿದೆ. ಇನ್ನೂ, ಈ ಸ್ಥಳ ಕಳೆದ ವರ್ಷ ಕುಸಿದು ಬಿದ್ದು, ಪುನರುಜ್ಜೀವನ ಕಂಡಿದೆ. ಇದಾದ ಬಳಿಕ ಜಿಲ್ಲಾಡಳಿತ ಈ ಸ್ಥಳವನ್ನ ಐತಿಹಾಸಿಕ ತಾಣ ಅಂತ ಗುರುತಿಸಿ ನಿಷೇಧಿತ ಸ್ಥಳವಾಗಿ ಮಾರ್ಪಡಿಸಿದೆ. ಜೊತೆಗೆ ಅಲ್ಲಿ ಬ್ಯಾರಿಕೇಡ್ ಅಳವಡಿಸಿದ ಮೇಲೆ ಹತ್ತದಂತೆ ಸೂಚಿಸಿ, ಶಿಕ್ಷಿಸುವ ಫಲಕ ಹಾಕಿದೆ. ಆದರೆ, ಪ್ರೇಮಿಗಳು, ಯುವ ಸಮೂಹ ಮಾತ್ರ ಅದ್ಯಾವುದಕ್ಕೂ ಕಿವಿಗೊಡದೆ ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿದೆ. ಇನ್ನೂ ಈ ಗೋಪುರ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಕಾರಣ ಭಕ್ತರು ಕಣ್ಮುಚ್ಚಿ ಬೆಟ್ಟಕ್ಕೆ ಹೋಗಬೇಕಾದ ದುಸ್ಥಿತಿ ಎದುರಾಗಿದೆ‌.

0

Leave a Reply

Your email address will not be published. Required fields are marked *