ಅಳಿವಿನಂಚಿನಲ್ಲಿರುವ ಕೆಂಪು ಪಾಂಡಾ ರಕ್ಷಿಸಿದ ಸಶಸ್ತ ಸೀಮಾ ಬಲ

ತೇಜ್​​ಪುರ್​: ಅಳಿವಿನಂಚಿನಲ್ಲಿರುವ ಕೆಂಪು ಪಾಂಡಾವನ್ನು ಅಸ್ಸಾಂನ ತೇಜ್​​ಪುರ – ತವಾಂಗ್ ಹೆದ್ದಾರಿಯಲ್ಲಿ ಸಶಸ್ತ್ರ ಸೀಮಾ ಬಲ ರಕ್ಷಿಸಿದೆ. ನಾಯಿಗಳ ದಾಳಿಗೆ ಬಲಿಯಾಗಬೇಕಿದ್ದ ಪಾಂಡಾವನ್ನು ಸೇನೆ ರಕ್ಷಿಸಿ ಮಾನವೀಯತೆ ಮೆರೆದಿದೆ. ಅಂಜನಿ ಕುಮಾರ್ ತಿವಾರಿ ಈ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಕೆಂಪು ಪಾಂಡಾ ರಕ್ಷಣೆಯಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅರಣ್ಯಾಧಿಕಾರಿಗಳು ಕೆಂಪು ಪಾಂಡಾವನ್ನು ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಪೂರ್ವ ಹಿಮಾಲಯ ಕೆಂಪು ಪಾಂಡಾಗಳ ಆವಾಸ ಸ್ಥಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಇವುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಅಂತರರಾಷ್ಟ್ರೀಯ ಪರಿಸರ ಸಂಸ್ಥೆಯ ಪ್ರಕಾರ ಈ ಕೆಂಪು ಪಾಂಡಾಗಳು ಅಳಿವಿನಂಚಿನಲ್ಲಿವೆ. ಆವಾಸಸ್ಥಾನಗಳ ನಷ್ಟ, ಬೇಟೆಯಲ್ಲಿ ಏರಿಕೆ ಮತ್ತು ಸಂತಾನೋತ್ಪತ್ತಿಯಲ್ಲಿ ಇಳಿಕೆಯಾಗಿರುವುದರಿಂದಾಗಿ ಇವುಗಳು ಅಳಿನಂಚಿಗೆ ಸರಿಯುತ್ತಿವೆ. ಸದ್ಯಕ್ಕೆ ಅಸ್ತಿತ್ವದಲ್ಲಿರುವ ಕೆಂಪು ಪಾಂಡಾಗಳ ಸಂಖ್ಯೆ ಕೇವಲ 10,000 ಎಂದು ಅಂದಾಜಿಸಲಾಗಿದೆ.

0

Leave a Reply

Your email address will not be published. Required fields are marked *