ಲಾಲು ಪುತ್ರಿ ಲೆಕ್ಕಪರಿಶೋಧಕನ ಬಂಧನ ಅವಧಿ 2 ದಿನ ವಿಸ್ತರಣೆ

ನವದೆಹಲಿ: ಬಿಹಾರದ ಸಿಎಂ ಲಾಲು ಪ್ರಸಾದ್ ಯಾದವ್​​ ಪುತ್ರಿ ಮಿಸಾ ಭಾರ್ತಿಯವರ ಲೆಕ್ಕ ಪರಿಶೋಧಕನನ್ನು ಜಾರಿ ನಿರ್ದೇಶನಾಲಯ ವಿಚಾರಣೆಯ ಅವಧಿಯನ್ನು ಎರಡು ದಿನಗಳ ಕಾಲ ವಿಸ್ತರಿಸಿದೆ. ಸಿಎ ರಾಜೇಶ್ ಅಗರ್​​ವಾಲ್ ಅವರನ್ನು 8,000 ಕೋಟಿ ರೂ. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಇದಕ್ಕೂ ಮುನ್ನ ಮಿಸಾ ಭಾರ್ತಿ ಮತ್ತು ಅವರ ಪತಿಗೆ ಸಿಬಿಐ ಸಮನ್ಸ್ ಜಾರಿಗೊಳಿಸಿತ್ತು.

ಅಕ್ರಮ ಹಣ ಸಾಗಾಟ ತಡೆ ಕಾಯ್ದೆ(ಪಿಎಂಎಲ್​ಎ) ಅಡಿಯಲ್ಲಿ ಅಗರ್​ವಾಲ್ ಅವರನ್ನು ಬಂಧಿಸಲಾಗಿದೆ. ಉದ್ಯಮಿಗಳಾದ ವೀರೇಂದ್ರ ಮತ್ತು ಸುರೇಂದ್ರ ಜೈನ್ ಅವರಿಗೆ ಹಣ ವರ್ಗಾವಣೆ ಮಾಡಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ.

ಕಳೆದ ಕೆಲವು ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ ದೆಹಲಿ ಸೇರಿದಂತೆ 22 ಕಡೆ ಏಕಕಾಲಕ್ಕೆ ದಾಳಿ ನಡೆಸಿತ್ತು. ಆ ಸಂದರ್ಭದಲ್ಲಿ 1,000 ಕೋಟಿ ರೂ.ಗಳನ್ನು ಅಕ್ರಮವಾಗಿ ಹಣ ಗಳಿಸಿರುವ ಆರೋಪ ಎದುರಾಗಿತ್ತು.

0

Leave a Reply

Your email address will not be published. Required fields are marked *