ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಅವ್ಯಾಹತವಾಗಿ ಬೆಳೆದಿದೆ : ಆರ್.ಅಶೋಕ್

ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಅವ್ಯಾಹತವಾಗಿ ಬೆಳೆದಿದ್ದು, ದೊಡ್ಡ ರಾಕೆಟ್ ನಂತಾಗಿದೆ ಎಂದು ಮಾಜಿ ಗೃಹ ಸಚಿವ ಆರ್.ಅಶೋಕ್ ಕಲಾಪದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅಶೋಕ್, ಯುವಕರು ಡ್ರಗ್ಸ್ ಸೇವನೆಗೆ ಬಲಿಯಾಗ್ತಿದ್ದಾರೆ. ಪ್ರತಿಷ್ಠಿತ ಶಾಲಾ, ಕಾಲೇಜುಗಳ ಸುತ್ತ ಮುತ್ತ ಡ್ರಗ್ಸ್ ಹಾವಳಿ ಹೆಚ್ಚಿದ್ದು, ಲಕ್ಸ್ ಸೋಪಿನ ಒಳಗೆ ಮಾದಕ ವಸ್ತುಗಳನ್ನು ಇಟ್ಟು ಮಾರಾಟ ಮಾಡಲಾಗ್ತಿದೆ ಎಂದ್ರು. ಸುಮಾರು 14 ರಿಂದ 30 ವಯಸ್ಸಿನ ಯುವಕರೇ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ರು.

ಅಶೋಕ್ ಮಾತಿಗೆ ಧ್ವನಿಗೂಡಿಸಿದ ಶಾಸಕ ಹ್ಯಾರೀಸ್ ತಮ್ಮ ಕ್ಷೇತ್ರ ಶಾಂತಿನಗರದಲ್ಲಿ ಡ್ರಗ್ಸ್ ಹಾವಳಿ ಜಾಸ್ತಿಯಾಗಿದ್ದು, ನೈಜಿರೀಯಾದಿಂದ ಬಂದವರು ಬಿಸಿನೆಸ್ ಆಗಿದೆ ಎಂದು ಆಕ್ರೋಶ ಹೊರಹಾಕಿದ್ರು.ಇನ್ನು ಶಾಸಕ ಸುರೇಶ್ ಕುಮಾರ್ ಮಾತನಾಡಿ, ಎಲ್ಲೆಲ್ಲಿ ಡ್ರಗ್ ದಂಧೆ ನಡೆಯುತ್ತಿದೆ ಎಂಬುದು ಪೊಲೀಸರಿಗೆ ಚೆನ್ನಾಗಿ ಗೊತ್ತು. ಯುವಪೀಳಿಗೆ ಡ್ರಗ್ ಮಾಫಿಯಾಗೆ ಬಲಿಯಾಗಿ ದೇಶವೇ ಅವನತಿಯತ್ತ ಸಾಗುತ್ತಿದೆ ಅಂತ ಆತಂಕ ವ್ಯಕ್ತಪಡಿಸಿದ್ರು…

ಇನ್ನು ಮೊದಲ ಬಾರಿಗೆ ಸದನದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಭರತ್ ಶೆಟ್ಟಿ ಕೂಡ ಡ್ರಗ್ಸ್ ಮಾಫಿಯಾ ಕುರಿತು ಹಿರಿಯರ ಮಾತಿಗೆ ಸೈ ಅಂದ್ರು.ಇನ್ನು ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಡ್ರಗ್ ಮಾಫಿಯಾ ದಲ್ಲಿ ತೊಡಗಿರುವ ವಿದೇಶಿಯರನ್ನು ವಾಪಸ್ ಕಳಿಸುವ ಕೆಲಸ ಆಗಬೇಕು, ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ಮಾದರಿಯಲ್ಲೇ ರಾತ್ರಿ ವೇಳೆ ಡ್ರಗ್ ಟೆಸ್ಟ್ ಆಗಬೇಕೆಂದು ಆಗ್ರಹಿಸಿದ್ರು…ಗೃಹಸಚಿವ ಪರಮೇಶ್ವರ್ ಮಾತನಾಡಿ, ಪೊಲೀಸ್ ಇಲಾಖೆಯು ಡ್ರಗ್ಸ್ ಮಾರಾಟ ತಡೆಯುವುದನ್ನು ಗಂಭೀರವಾಗಿ ಪರಿಗಣಿಸಿದೆ. ಇಡೀ ದೇಶದಲ್ಲಿ ಡ್ರಗ್ಸ್ ದಂಧೆ ನಿಲ್ಲಬೇಕು. ಇದಕ್ಕಾಗಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆ ನಡೆಯಬೇಕು. ಜನರಲ್ಲಿ ಅರಿವು ಮೂಡುವಂತಾಗಬೇಕು ಎಂದ್ರು..

0

Leave a Reply

Your email address will not be published. Required fields are marked *