ಮಕ್ಕಳಿಗೂ ಬಿಡುತ್ತಿಲ್ಲ “ಮಧುಮೇಹ”

ಮಕ್ಕಳ ಲೈಫ್​​ಸ್ಟೈಲ್​ ಸದ್ಯ ಹೇಗಾಗಿದೆ ಅಂದ್ರೆ ಕೈನಲ್ಲೊಂದು ಮೊಬೈಲ್​, ಅದರೊಟ್ಟಿಗೆ ಸ್ವಲ್ಪ ಕುರುಕುಲು ತಿಂಡಿಗಳು ಇದ್ದರೆ ಸಾಕು ದಿನವನ್ನ ಆರಾಮಾಗಿ ಕಳೆದುಬಿಡ್ತಾರೆ. ಹೀಗಾಗಿಯೇ 40ರ ನಂತರ ಬರ್ತಿದ್ದ  ಕಾಯಿಲೆಗಳು ಇದೀಗ 2-3 ವರ್ಷ ಇರೋ ಟೈಂನಲ್ಲೇ ಅಟ್ಯಾಕ್​ ಮಾಡ್ತಿವೆ.

ಹಿಂದೆಲ್ಲ ಮಕ್ಕಳು ಆಟ- ಪಾಠ ಅಂತ ಬ್ಯೂಸಿಯಾಗ್ತಿದ್ದರು, ಆದ್ರೆ ಈಗ ಕಾಲ ತುಂಬಾನೇ ಬದಲಾಗಿ ಬಿಟ್ಟಿದೆ. ಈಗಂತೂ ಮಕ್ಕಳು ದೈನಂದಿನ ಚುಟುವಟಿಕೆಗಳಿಗೆ ಬ್ರೇಕ್​ ಹಾಕಿ, ಮೊಬೈಲ್, ಟಿವಿ, ಕಂಪ್ಯೂಟರ್​ ಅಂತ ಇವುಗಳ ಮಧ್ಯೆಯೇ ಮುಳುಗಿ ಹೋಗಿರ್ತಾರೆ. ಜೊತೆಗೆ ಆರೋಗ್ಯಕರ ಆಹಾರ ತೆಗೆದುಕೊಳ್ಳದೆ ಜಂಕ್​ ಫುಡ್​​ಗಳತ್ತ ಮುಖ ಮಾಡ್ತಿದ್ದಾರೆ. ಇದ್ರಿಂದಾಗಿ ಮಕ್ಕಳು ಮತ್ತು ಹದಿವಯಸ್ಕರಲ್ಲಿ ಅತಿಹೆಚ್ಚು ಮಧುಮೇಹ ಸಮಸ್ಯೆ ಕಾಡ್ತಿದೆ ಅಂತಿದ್ದಾರೆ ವೈದ್ಯರು.

ಚಿಲ್ಡ್ರನ್ಸ್ ಸ್ಪೆಷಲ್​ ಆಸ್ಪತ್ರೆಯಾಗಿರೋ ರೈನ್​​ ಬೋದಲ್ಲಿ ಮಧುಮೇಹಕ್ಕೆ ತುತ್ತಾಗ್ತಿರೋರ ಸಂಖ್ಯೆ ಹೆಚ್ಚಾಗ್ತಿದೆ ಅಂತೆ. ದೇಶದಲ್ಲಿ ಮಕ್ಕಳು ಹಾಗು ಹದಿವಯಸ್ಕರಲ್ಲಿ ವರದಿಯಾಗುತ್ತಿರುವ ಮಧುಮೇಹ ಹೆಚ್ಚುತ್ತಿರುವ ಸಂಖ್ಯೆಯ ಕಾರಣದಿಂದಾಗಿ ಅವರಿಗಾಗಿಯೇ ಸೀಮಿತವಾಗಿರುವ ಈ ಚಿಕಿತ್ಸಾಲಯವನ್ನ ತೆರೆಯಲು ಮುಂದಾಗಿದ್ದಾರೆ. ಭಾರತದಲ್ಲಿ 97,000ಕ್ಕಿಂತ ಹೆಚ್ಚಿನ ಮಕ್ಕಳು 1ನೇ ವಿಧದ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಮಾಹಿತಿ ಕೊರತೆಯಿಂದಾಗಿ, ಕಾಯಿಲೆಗೆ ತುತ್ತಾಗಿ ಕೊನೆಯ ಹಂತಕ್ಕೆ ಬರುವಾಗ ರೋಗಿಗಳು ಆಸ್ಪತ್ರೆಯತ್ತ ಬರ್ತಾರೆ ಅಂತಾರೆ ವೈದ್ಯರು.

ಒಟ್ಟಾರೆ, ಜೀವನ ಶೈಲಿ ಬದಲಾದಂತೆ ದಿನೇ ದಿನೇ ಖಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆಯೂ ಸಹ ಹೆಚ್ಚಾಗ್ತಿದೆ. ಪೋಷಕರು ಸ್ವಲ್ಪ ಎಚ್ಚರ ವಹಿಸಿದ್ದರೆ, ಮಕ್ಕಳಲ್ಲಿ ಮಧುಮೇಹ ಕಾಯಿಲೆ ಬರದಂತೆ ನೋಡಿಕೊಳ್ಳಬಹುದು. ಇಲ್ಲಾ ಅಂದ್ರೆ ಜೀವನಪರ್ಯಂತ ಈ ಮಧುಮೇಹದಿಂದ ಬಳಲಬೇಕಾಗುತ್ತೆ.

ದೀಪಾ ಎಸ್​, ಸುದ್ದಿಟಿವಿ. ಬೆಂಗಳೂರು.

0

Leave a Reply

Your email address will not be published. Required fields are marked *