ಕೋತಿಯ ಅಂತ್ಯ ಸಂಸ್ಕಾರ ಮಾಡಿದ ಹನುಮ ಭಕ್ತರು

ಹುಬ್ಬಳ್ಳಿ: ಹನುಮ ಜಯಂತಿ ಹೆಸರಿನಲ್ಲಿ ದೊಡ್ಡದಾಗಿ ಪ್ರಚಾರ ಗಿಟ್ಟಿಸ್ಕೊಂಡು ಶಾಂತಿ ಕದಡುವವರ ಮಧ್ಯೆ ಇಲ್ಲೊಂದು ಅಪರೂಪದ ಘಟನೆ ನಡೆದಿದೆ. ಪ್ರಾಣಬಿಟ್ಟ ಮಂಗನನ್ನ ಊರಿನ ಜನರೇ ಅಂತ್ಯಸಂಸ್ಕಾರ ಮಾಡಿ ತಮ್ಮ ದೈವ ಭಕ್ತಿಯನ್ನ ತೋರ್ಪಡಿಸಿದ್ದಾರೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಇಂತಹ ಒಂದು ಮನಮಿಡಿಯುವ ಘಟನೆಗೆ ಸಾಕ್ಷಿಯಾಗಿದೆ. ಇವತ್ತು ಕೋತಿಯೊಂದು ಬೀದಿನಾಯಿಗಳ ಕಡಿತದಿಂದ ಒದ್ದಾಡಿ ಪ್ರಾಣಬಿಟ್ಟಿತ್ತು. ಇದು ಊರಲ್ಲಿರೋ ಒಂದಿಷ್ಟು ಹುಡುಗರ ಗಮನಕ್ಕೂ ಬಂದಿದೆ. ಗಾಯಗೊಂಡಿದ್ದ ಮಂಗನನ್ನ ಉಳಿಸೋದಕ್ಕೆ ಯತ್ನಿಸಿದರಾದರೂ ಅದು ಸಾಧ್ಯವಾಗಿಲ್ಲ. ಆದರೆ ಗಾಯಗೊಂಡು ಪ್ರಾಣಬಿಟ್ಟ ಮಂಗನನ್ನ ಸ್ನಾನ ಮಾಡಿಸಿದ್ದಾರೆ. ಬಳಿಕ ಭಕ್ತಿಯಿಂದಲೇ ಅದಕ್ಕೆ ಪೂಜಿಸಿದ್ದಾರೆ. ಇದೆಲ್ಲ ಮಾಡೋವಾಗ ಬರೀ ಹಿಂದೂಗಳಷ್ಟೇ ಅಲ್ಲದೆ, ಮುಸ್ಲಿಂ ಧರ್ಮದ ಹುಡುಗರೂ ಇದ್ದರು. ಬರೀ ಇಷ್ಟೇ ಆಗಲಿಲ್ಲ, ಬಳಿಕ ಅಂತ್ಯ ಸಂಸ್ಕಾರಕ್ಕೆ ಎಲ್ಲ ಸಿದ್ಧತೆ ಮಾಡಿ ಕೊಂಡು ಹುಡುಗರು ಅಲ್ಲೇ ಊರಿನ ದೇವಸ್ಥಾನದ ಭಜನಾ ಮಂಡಳಿಗೆ ಹೇಳಿದ್ದಾರೆ. ಅಲಂಕರಿಸಿದ್ದ ಟ್ಯ್ರಾಕ್ಟರ್ ಮೇಲೆ ಮಂಗನ ಪಾರ್ಥಿವ ಶರೀರ ಇಟ್ಟು ಊರ ತುಂಬ ಭಜನೆ ಮಾಡುತ್ತಾ ಮೆರವಣಿಗೆ ಮಾಡಿದ್ದಾರೆ. ಜಾತಿ-ಧರ್ಮ ಮೀರಿ ಜೈ ಆಂಜನೇಯ ಅಂತ ಜೈಕಾರ ಹಾಕಿದ್ದಾರೆ. ಜಾತಿ- ಧರ್ಮ ಮೀರಿ ತಮ್ಮ ಭಕ್ತಿ-ಶ್ರದ್ಧೆಯನ್ನ ವೀರಾಂಜನೇಯನ ಮೇಲೆ ತೋರಿಸಿದ್ದಾರೆ. ಹನುಮ ಜಯಂತಿ ಅದು ಇದೂ ಪುಂಡಾಟಿಕೆ, ಪ್ರಚಾರ ಪಡೆದು, ಡಾಂಭಿಕ ಭಕ್ತಿ ತೋರಿಸುವವರ ಮಧ್ಯೆ ಈ ಹಳ್ಳಿ ಹುಡುಗರ ಭಕ್ತಿ ಜತೆಗಿನ ಸಾಮರಸ್ಯ ನಡೆಗೆ ಊರ ಜನರೆಲ್ಲ ಶಹಬ್ಬಾಶ್ ಅಂತ ಬೆನ್ನು ತಟ್ಟಿದಾರೆ.

0

Leave a Reply

Your email address will not be published. Required fields are marked *