ಸಾಮಾಜಿಕ ಭೀತಿಯನ್ನು ಎದುರಿಸುವುದು ಹೇಗೆ.??

ಸಾಮಾನ್ಯವಾಗಿ ಕೆಲವೊಬ್ಬರಲ್ಲಿ ತುಂಬಾ ಕಾಡುವ ತೊಂದರೆ ಎಂದರೆ ಅದು ಸಾಮಾಜಿಕ ಭೀತಿ ಅಥವ ಭಯ. ಅವರಲ್ಲಿರುವ ಕೆಲವು ಋಣಾತ್ಮಕ ಚಿಂತನೆಗಳಿಂದ ಅಥವಾ ಅವರ ಮಾನಸಿಕ ಸ್ಥಿತಿಯಿಂದ ಅವರಿಗೆ ಸಮಾಜದಲ್ಲಿ ತೆರೆದುಕೊಳ್ಳುವುದಕ್ಕೆ ಆಗುವುದಿಲ್ಲ ಅಥವಾ ಅವರಿಗೆ ಅಂತಹ ಸಂದರ್ಭಗಳೇ ಸಿಗುವುದಿಲ್ಲ. ಸಾಮಾಜಿಕ ಭೀತಿ ಎಂಬುವುದು ಕೆಲವೊಬ್ಬರ ಜೀವನಶೈಲಿಯನ್ನೂ ಸಹ ಅವಲಂಭಿಸಿರುತ್ತದೆ. ಹಾಗಾದರೆ ನಿಮ್ಮಲ್ಲಿರುವ ಸಾಮಾಜಿಕ ಭೀತಿಯನ್ನು ಎದುರಿಸುವುದು ಹೇಗೆ ಅಥವ ನಿಮ್ಮಿಂದ ಅದನ್ನು ದೂರ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿವೆ ನೋಡಿ ಕೆಲವು ಸಲಹೆಗಳು.

1. ಋಣಾತ್ಮಕ ಆಲೋಚನೆಗಳ ಸವಾಲು: ನಿಮಗೆ ನೀವೇ ಯಾವತ್ತೂ ಕಡಿಮೆ ಅಂದುಕೊಳ್ಳಬೇಡಿ. ನಿಮ್ಮ ಸೋಲಿನ ಬಗ್ಗೆ, ವೈಫಲ್ಯದ ಬಗ್ಗೆ ನಕಾರಾತ್ಮಕ ಯೋಚನೆ ಬಂದಾಗಲೆಲ್ಲಾ, ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ನಿಮ್ಮ ಸ್ನೇಹಿತ ಅಥವಾ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ.

2. ನಿಮ್ಮ ಉಸಿರನ್ನು ನಿಯಂತ್ರಿಸುವುದನ್ನು ಕಲಿಯಿರಿ: ಸಾಮಾಜಿಕ ಭೀತಿ ಹೆಚ್ಚಾದಾಗ ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ, ಅದು ನಿಮ್ಮ ದೇಹದಲ್ಲಿ ಆಮ್ಲಜನಕ ಮತ್ತು ಕಾರ್ಬನ್ ಡೈಆಕ್ಸೈಡ್​​​​​​ನ ಅಸಮತೋಲನ ಉಂಟು ಮಾಡುತ್ತದೆ ಮತ್ತು ನೀವು ಆತಂಕಕಾರಿ, ಅಸ್ವಸ್ಥ, ಚಂಚಲ ಮತ್ತು ತಲೆ ಸುತ್ತುವಂತೆ ಮಾಡುತ್ತದೆ. ನಿಮ್ಮ ಭೌತಿಕ ರೋಗಲಕ್ಷಣಗಳನ್ನು ನಿಯಂತ್ರಣದಲ್ಲಿಡಲು ಆತಂಕದ ನಿಮ್ಮ ಉಸಿರಾಟವನ್ನು ನಿಧಾನಗೊಳಿಸುವುದು ಹೇಗೆಂದು ತಿಳಿಯಿರಿ.

3. ಆತಂಕಗಳನ್ನು ಎದುರಿಸಿ: ಆತಂಕದಿಂದ ದೂರ ಓಡಿಹೋಗುವ ಬದಲು ನಿಮ್ಮ ಭಯವನ್ನು ಎದುರಿಸಿ ಏಕೆಂದರೆ ಇದು ನಿಮ್ಮಲ್ಲಿರುವ ಭಿತಿಯನ್ನು ಕ್ರಮೇಣವಾಗಿ ಕಡಿಮೆಗೊಳಿಸುತ್ತದೆ. ಉದಾಹರಣೆಗೆ, ನಿಮಗೆ ಸಾರ್ವಜನಿಕವಾಗಿ ಮಾತನಾಡಲು ಹೆದರಿಕೆಯಾದರೆ ಮೊದಲು 2-3 ಸ್ನೇಹಿತರ ಮುಂದೆ ಮಾತನಾಡಿ ಮತ್ತು ಕ್ರಮೇಣವಾಗಿ ನಿಮ್ಮ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳಿ.

4. ಜೀವನಶೈಲಿಯಲ್ಲಿ ಧನಾತ್ಮಕ ಬದಲಾವಣೆಗಳನ್ನು ತನ್ನಿ: ಕೆಫೀನ್ ಅನ್ನು ತ್ಯಜಿಸಿ ಅಥವಾ ಮಿತಿಗೊಳಿಸಿ, ಕುಡಿಯುವುದಾದರೆ ಮಿತವಾಗಿ ಮಾತ್ರ ಕುಡಿಯಿರಿ. ಧೂಮಪಾನವನ್ನು ಸಂಪೂರ್ಣವಾಗಿ ಬಿಟ್ಟುಬಿಡಿ ಮತ್ತು ಸಾಕಷ್ಟು ನಿದ್ರೆ ಮಾಡಿ. ಇದು ನಿಮ್ಮ ಒಟ್ಟಾರೆ ಆತಂಕದ ಮಟ್ಟವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಯಶಸ್ಸಿಗೆ ಸಹಾಯ ಮಾಡುತ್ತದೆ.

5. ವಿಶ್ರಾಂತಿ ತಂತ್ರಗಳನ್ನು ತಿಳಿದುಕೊಳ್ಳಿ: ಉಸಿರಾಟದ ವ್ಯಾಯಾಮದ ಜೊತೆಗೆ, ಧ್ಯಾನ, ಯೋಗ, ಮತ್ತು ಸ್ನಾಯು ವಿಶ್ರಾಂತಿಗಳಂತಹ ತಂತ್ರಗಳ ನಿಯಮಿತ ಅಭ್ಯಾಸವು ನಿಮಗೆ ಆತಂಕದ ಭೌತಿಕ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

0

Leave a Reply

Your email address will not be published. Required fields are marked *