ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ದೂರದರ್ಶನದ ಕೇಸರೀಕರಣ : ಇನ್ನು ಮುಂದೆ ದೂರದರ್ಶನದ ಲೋಗೋ ಬಣ್ಣ ಕೇಸರಿ..
DD News logo: ನಮ್ಮ ತತ್ವ ಬದಲಾಗಿಲ್ಲ. ಆದರೆ ನಾವು ಹೊಸ ಅವತಾರದಲ್ಲಿ ಬರುತ್ತಿದ್ದೇವೆ ಎಂದು ಡಿಡಿ ತನ್ನ ಎಕ್ಸ್ (ಟ್ವೀಟರ್) ಖಾತೆಯಲ್ಲಿ ಹೇಳಿಕೊಂಡಿದೆ.
ನವದೆಹಲಿ : ಸರ್ಕಾರಿ ಮಾಧ್ಯಮ ದೂರದರ್ಶನ ತನ್ನ ಬಣ್ಣ ಬದಲಿಸಿಕೊಂಡಿದೆ. ಅಥವಾ ಬಣ್ಣವನ್ನು ಬದಲಿಸಲಾಗಿದೆ. ದೂರದರ್ಶನದ ಲೋಗೋ ಚಿರಪರಿಚಿತ. ಹಾಗೆ ಅದರ ಮ್ಯೂಸಿಕ್ ಕೂಡ. ಇನ್ನು ಮುಂದೆ ದೂರದರ್ಶನದ ಲೋಗೋ ಬಣ್ಣ ಕೇಸರಿ. ದೇಶವನ್ನೇ ಕೇಸರಿಕರಣ ಮಾಡುವುದರ ಭಾಗ ಇದು ಎಂಬ ಆರೋಪವೂ ಈಗ ಕೇಳಿ ಬರುತ್ತಿದೆ.
ದೂರದರ್ಶನಕ್ಕೆ ನ್ಯಾಷನಲ್ ಬ್ರಾಡಕಾಸ್ಟರ್ ಎಂದು ಕರೆಯಲಾಗುತ್ತದೆ. ನ್ಯಾಷನಲ್ ಎಂದರೆ ರಾಷ್ಟ್ರ, ಆದರೆ ಈಗ ಬದಲಾದ ಬಣ್ನ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತಿಲ್ಲ ಎಂದು ಪ್ರತಿ ಪಕ್ಷದ ನಾಯಕರು ಹಾಗೂ ದೂರದರ್ಶನದ ಮಾಜಿ ಸಿಇಓ ಗಳು ಆರೋಪಿಸಿದ್ದಾರೆ.
ನಮ್ಮ ತತ್ವ ಬದಲಾಗಿಲ್ಲ. ಆದರೆ ನಾವು ಹೊಸ ಅವತಾರದಲ್ಲಿ ಬರುತ್ತಿದ್ದೇವೆ ಎಂದು ಡಿಡಿ ತನ್ನ ಎಕ್ಸ್ (ಟ್ವೀಟರ್) ಖಾತೆಯಲ್ಲಿ ಹೇಳಿಕೊಂಡಿದೆ.
