ಬಿಬಿಎಂಪಿ ಮೇಯರ್ ಉಪಮೇಯರ್​​ ಚುನಾವಣೆಗೆ ಮುಹೂರ್ತ ಫಿಕ್ಸ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್- ಉಪಮೇಯರ್ ಚುನಾವಣೆಗೆ ಈಗಾಗಲೆ ಮುಹೂರ್ತ ಫಿಕ್ಸ್​ ಆಗಿದೆ. ಈ ಹಿನ್ನಲೆ ಮೈತ್ರಿ ಮಾತುಕತೆ, ಮೇಯರ್ ಉಪಮೇಯರ್ ಸ್ಥಾನ ಯಾರಿಗೆ ನೀಡ್ಬೇಕು ಅನ್ನೋ ಚರ್ಚೆ ಆರಂಭವಾಗಿದ್ದು, ಪಕ್ಷದ ವರಿಷ್ಟರ ಮಟ್ಟದಲ್ಲಿ ಸಭೆಗಳು ನಡೀತಿವೆ.

ಮೇಯರ್​ ಚುನಾವಣೆಗೆ ಸೆಪ್ಟಂಬರ್ 28ರಂದು ಮುಹೂರ್ತ ಫಿಕ್ಸ್​ ಆಗಿದ್ದು, ಭರದ ಸಿದ್ಧತೆ ನಡೀತಿದೆ. ಈ ಬಾರಿಯೂ ಬಿಬಿಎಂಪಿ ಮೇಯರ್ -ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಮುಂದುವರಿಯುತ್ತೆ. ಆದ್ರೆ ಜೆಡಿಎಸ್​ ಕಾಂಗ್ರೆಸ್​ ಮಧ್ಯೆ ಮೇಯರ್ – ಉಪಮೇಯರ್ ಪಟ್ಟ, ಸ್ಥಾಯಿ ಸಮಿತಿ ಅಧಿಕಾರದ ಬಗ್ಗೆ ಚರ್ಚೆಗಳು ನಡೀತಿವೆ. ಇದೇ ವೇಳೆ ಬಿಬಿಎಂಪಿ ಮೈತ್ರಿ ವಿಚಾರವಾಗಿ ಜೆಡಿಎಸ್ ವರಿಷ್ಠರ ಜೊತೆ ನಮ್ಮ ಪಕ್ಷದ ಪ್ರಮುಖರು ಚರ್ಚೆ ನಡೆಸಿ ಮುಂದುವರೆಯಲಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಇನ್ನು ಮೇಯರ್ ಯಾರಾಗಬೇಕು ಯಾವ ಪಕ್ಷದವರು ಮೇಯರ್ ಆಗಬೇಕು ಅನ್ನೋದನ್ನೂ ಕೂತು ಫೈನಲ್ ಮಾಡುತ್ತೇವೆ ಅಂತ ತಿಳಿಸಿದ್ರು.

ಇನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಪ್ರತಿಕ್ರಿಯಿಸಿ, ಜಾತ್ಯಾತೀತ ಪಕ್ಷಗಳಾದ ಕಾಂಗ್ರೆಸ್​-ಜೆಡಿಎಸ್​ ಜೊತೆಗಿರಬೇಕು. ಆದ್ರೆ ಕೋಮುವಾದಿ ಪಕ್ಷಕ್ಕೆ ಅಧಿಕಾರ ನೀಡಬಾರದು ಅಂದ್ರು. ಮೇಯರ್-ಉಪಮೇಯರ್ ಸ್ಥಾನ ಯಾರಿಗೆ ಸಿಗಬೇಕು ಎಂಬ ಕುರಿತು ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಚರ್ಚೆ ನಡೆಯಲಿದೆ. ಈ ಚರ್ಚೆಯ ತೀರ್ಮಾನದ ಪ್ರಕಾರ ನಡೆಯಲಾಗುವುದು ಅಂದ್ರು.

ಇನ್ನು ಎಲ್ಲಾ ಪಾಲಿಕೆ ಸದಸ್ಯರಿಗೆ ಈಗಾಗಲೇ ಚುನಾವಣಾ ನೋಟೀಸ್ ನೀಡಲಾಗ್ತಿದೆ. ಚುನಾವಣಾ ತಯಾರಿ ಹಾಗೂ ಭದ್ರತೆ ಬಗ್ಗೆ ಸಭೆಗಳನ್ನು ನಡೆಸಲಾಗ್ತಿದೆ ಅಂತ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ರು.ಕಾಂಗ್ರೆಸ್​ ನಿಯಮದ ಮೇಯರ್​ ಪಟ್ಟಕ್ಕೆ ಈಗಾಗಲೇ ಮುಂಚೂಣಿಯಲ್ಲಿರೋದು ಡಿ.ಜೆ.ಹಳ್ಳಿ ವಾರ್ಡ್​ನ ಸಂಪತ್​ರಾಜ್. ಇನ್ನು ಉಪಮೇಯರ್ ಸ್ಥಾನಕ್ಕೆ ಜೆಡಿಎಸ್​ ನಲ್ಲಿ ಪೈಪೋಟಿ ಇದ್ದು ನೇತ್ರ ನಾರಾಯಣ್ ಹಾಗೂ ರಮೀಳ ಉಮಾಶಂಕರ್ ಹೆಸರು ಕೇಳಿಬರ್ತಿದೆ. ಎಲ್ಲದಕ್ಕೂ ಸೆಪ್ಟಂಬರ್ 28ರಂದು ಉತ್ತರ ಸಿಗಲಿದೆ.

ಸೌಮ್ಯಶ್ರೀ ಮಾರ್ನಾಡ್, ಸುದ್ದಿಟಿವಿ, ಬೆಂಗಳೂರು

0

Leave a Reply

Your email address will not be published. Required fields are marked *