ಕೈರೋ : ಯುದ್ಧ ಪೀಡಿತ ಸುಡಾನ್‌ನಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಣೆಕಟ್ಟು ಒಡೆದು ಕನಿಷ್ಠ 60 ಜನರು ಮೃತಪಟ್ಟಿದ್ದಾರೆ. ದುರಂತದಲ್ಲಿ ಹಲವು ಮಂದಿ ನಾಪತ್ತೆಯಾಗಿದ್ದು ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಕೆಂಪು ಸಮುದ್ರದ ಸಮೀಪದಲ್ಲಿದ್ದ ಅರ್ಬತ್ ಅಣೆಕಟ್ಟು ಕೊಚ್ಚಿಹೋಗಿದೆ. ಅಣೆಕಟ್ಟು ಒಡೆದ ಪರಿಣಾಮ ಸುಮಾರು 20 ಹಳ್ಳಿಗಳಿಗೆ ನೀರು ನುಗ್ಗಿದ್ದು 50 ಸಾವಿರ ಮನೆಗಳು ಕೊಚ್ಚಿ ಹೋಗಿದೆ.

ಅರ್ಬತ್ ಅಣೆಕಟ್ಟು 25 ಮಿಲಿಯನ್ ಕ್ಯೂಬಿಕ್ ಮೀಟರ್ ಸಾಮರ್ಥ್ಯವನ್ನು ಹೊಂದಿತ್ತು. ಕರಾವಳಿ ನಗರವಾದ ಪೋರ್ಟ್ ಸುಡಾನ್‌ನ ಕುಡಿಯುವ ನೀರಿನ ಮುಖ್ಯ ಮೂಲವಾಗಿತ್ತು. ಕೊಚ್ಚಿಕೊಂಡು ಹೋದ ಪ್ರದೇಶವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ನೆರೆಗೆ ವಿದ್ಯುತ್ ಕಂಬ ಮತ್ತು ನೀರಿನ ಪೈಪ್‌ಗಳು ನಾಶವಾಗಿವೆ. ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ 150 ರಿಂದ 200 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *