ಈಶಾನ್ಯ ಭಾರತ, ಬಾಂಗ್ಲಾಗೆ ಮೋರಾ ಚಂಡಮಾರುತದ ಭೀತಿ

ನವದೆಹಲಿ: ಮುಂದಿನ 24 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಮೋರಾ ಚಂಡಮಾರುತ ದಾಳಿ ನಡೆಸಲಿದ್ದು, ಪಶ್ಚಿಮ ಬಂಗಾಳದ ಮೀನುಗಾರರಿಗೆ ನೀರಿಗಿಳಿಯದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​​ಡಿಎಂಎ) ಸೂಚಿಸಿದೆ. ಈಶಾನ್ಯ ಭಾರತ ಮತ್ತು ಬಾಂಗ್ಲಾಗಳ ಮೇಲೆ ಮೋರಾ ಚಂಡಮಾರುತ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಗಂಟೆಗೆ 117 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸಲಿದೆ. ಈಶಾನ್ಯ ಭಾರತ, ಬಾಂಗ್ಲಾದಲ್ಲಿ ಮೋರಾ ಚಂಡಮಾರುತ ಭೀತಿ ಎದುರಾಗಿದ್ದು, ಬಂಗಾಳ ಕೊಲ್ಲಿಯಿಂದ ಈಶಾನ್ಯ ಭಾರತದತ್ತ ಮೋರಾ ಚಂಡಮಾರುತ ಪಯಣಿಸಲಿದೆ. ತ್ರಿಪುರಾ, ಮಿಜೋರಾಂ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಇನ್ನು ಬಾಂಗ್ಲಾದಲ್ಲಿ ಕೂಡ ಭಾರೀ ಗಾಳಿ, ಮಳೆಗಳ ಅವಾಂತರ ಎದುರಾಗುವ ಸಾಧ್ಯತೆ ಇದೆ.

0

Leave a Reply

Your email address will not be published. Required fields are marked *